
ನವದೆಹಲಿ: ತ್ರಿಪುರಾ ನಗರ ಸ್ಥಳಿಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದಿದೆ. ಟಿಎಂಸಿ ಮತ್ತು ಸಿಪಿಐಎಂ ಪಕ್ಷಗಳ ವಿರುದ್ಧ ಬಿಜೆಪಿ ಭರ್ಜರಿ ಜಯಭೇರಿಯನ್ನು ಬಾರಿಸಿದೆ.
ತ್ರಿಪುರಾ ರಾಜ್ಯಾದ್ಯಂತ 13 ವಿವಿಧ ಮತ ಎಣಿಕೆ ಕೇಂದ್ರಗಳಲ್ಲಿ ಇಂದು ನಡೆದ ಮತ ಎಣಿಕೆಯಲ್ಲಿ ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಸೇರಿದಂತೆ 13 ಯುಎಲ್ಬಿ (ನಗರ ಸ್ಥಳೀಯ ಸಂಸ್ಥೆಗಳು) ವ್ಯಾಪ್ತಿಯ 222 ಸ್ಥಾನಗಳ ಪೈಕಿ ಬಿಜೆಪಿ 217 ಸ್ಥಾನಗಳನ್ನು ಗೆದ್ದಿದೆ.
ಅಗರ್ತಲಾ ಮುನ್ಸಿಪಲ್ ಕಾರ್ಪೊರೇಶನ್ನ ಎಲ್ಲಾ 51 ಸ್ಥಾನಗಳನ್ನು ಬಿಜೆಪಿ ಗೆದ್ದು ಬೀಗಿದೆ.
ನವೆಂಬರ್ 24 ರಂದು ಚುನಾವಣೆ ನಡೆದ 222 ಸ್ಥಾನಗಳಲ್ಲಿ ಸಿಪಿಐಎಂ 3 ಸ್ಥಾನಗಳನ್ನು ಮತ್ತು ಎಐಟಿಎಂಸಿ ತಲಾ ಒಂದು ಸ್ಥಾನ ಪಡೆದಿದೆ. ಒಬ್ಬ ಸ್ವತಂತ್ರ ಅಭ್ಯರ್ಥಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಆಡಳಿತಾರೂಢ ಬಿಜೆಪಿ 20 ನಗರ ಸಂಸ್ಥೆಗಳಲ್ಲಿ 112 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿತ್ತು. ಏಳು ಯುಎಲ್ಬಿಗಳಲ್ಲಿ ಬೇರೆ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ (51 ವಾರ್ಡ್ಗಳು), 13 ಮುನ್ಸಿಪಲ್ ಕೌನ್ಸಿಲ್ಗಳು ಮತ್ತು ಆರು ನಗರ ಪಂಚಾಯತ್ಗಳು ಸೇರಿದಂತೆ ಒಟ್ಟು 334 ಸ್ಥಾನಗಳಿಗೆ ಒಟ್ಟು 785 ಅಭ್ಯರ್ಥಿಗಳು ಕಣದಲ್ಲಿದ್ದರು
ಈ ಚುನಾವಣಾ ಗೆಲುವು ಜನರು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸಿದೆ. ಈಶಾನ್ಯದಲ್ಲಿ ಅಸ್ತಿತ್ವ ಗಳಿಸುವ ಟಿಎಂಸಿ ಕುತಂತ್ರವನ್ನು ಈ ಫಲಿತಾಂಶ ಮಣ್ಣು ಮುಕ್ಕಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


