ನವದೆಹಲಿ: ಮೂಡೀಸ್ ಇನ್ವೆಸ್ಟರ್ಸ್ ಸರ್ವೀಸ್ ತನ್ನ ಇತ್ತೀಚಿನ ವರದಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಬಲವಾದ ಚೇತರಿಕೆಯನ್ನು ದಾಖಲಿಸುತ್ತದೆ ಎಂದು ಅಂದಾಜಿಸಿದೆ. ಮೂಡೀಸ್ ಭಾರತದ ಜಿಡಿಪಿ ಬೆಳವಣಿಗೆಯನ್ನು FY22 ಮತ್ತು FY23 ರಲ್ಲಿ ಕ್ರಮವಾಗಿ 9.3% ಮತ್ತು 7.9% ಎಂದು ನಿಗದಿಪಡಿಸಿದೆ.
ಕೋವಿಡ್ ವ್ಯಾಕ್ಸಿನೇಷನ್ನಲ್ಲಿನ ಸ್ಥಿರ ಪ್ರಗತಿಯು ಭಾರತದ ಆರ್ಥಿಕ ಚಟುವಟಿಕೆಯಲ್ಲಿ ನಿರಂತರ ಚೇತರಿಕೆಗೆ ಬೆಂಬಲ ನೀಡುತ್ತದೆ ಎಂದು ಮೂಡೀಸ್ನ ವಿಶ್ಲೇಷಕಿ ಶ್ವೇತಾ ಪಟೋಡಿಯಾ ಹೇಳಿದ್ದಾರೆ.
“ಸಾಂಕ್ರಾಮಿಕ ನಿರ್ಬಂಧಗಳನ್ನು ಸರಾಗಗೊಳಿಸಿದ ನಂತರ ಗ್ರಾಹಕರ ಬೇಡಿಕೆ, ಖರ್ಚು ಮತ್ತು ಉತ್ಪಾದನಾ ಚಟುವಟಿಕೆಯು ಚೇತರಿಸಿಕೊಳ್ಳುತ್ತಿದೆ. ಹೆಚ್ಚಿನ ಸರಕುಗಳ ಬೆಲೆಗಳನ್ನು ಒಳಗೊಂಡಂತೆ ಈ ಪ್ರವೃತ್ತಿಗಳು ಮುಂದಿನ 12-18 ತಿಂಗಳುಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಉತ್ತೇಜಿಸುತ್ತದೆ” ಪಟೋಡಿಯಾ ಹೇಳಿದ್ದಾರೆ.
ಭಾರತವು ಇತ್ತೀಚೆಗೆ ದಾಖಲೆಯ ಕೋವಿಡ್-19 ಲಸಿಕೆ ಡೋಸ್ ಅನ್ನು ತನ್ನ ನಾಗರಿಕರಿಗೆ ನೀಡಿದೆ. ಎರಡನೇ ಅಲೆಯ ನಂತರ ಭಾರತದಲ್ಲಿ ಲಸಿಕಾ ಅಭಿಯಾನ ವೇಗವನ್ನು ಪಡೆದುಕೊಂಡಿದೆ ಎಂದು ಮೂಡೀಸ್ ತಿಳಿಸಿದೆ. ಭಾರತದ ಜನಸಂಖ್ಯೆಯ ಸುಮಾರು 30% ರಷ್ಟು ಜನರು ಈಗ ಎರಡು ಡೋಸ್ಗಳೊಂದಿಗೆ ಸಂಪೂರ್ಣ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಆದರೆ ಸುಮಾರು 55% ಜನಸಂಖ್ಯೆಯು ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ. ಸುಧಾರಿತ ವ್ಯಾಕ್ಸಿನೇಷನ್ ಕವರೇಜ್ ಗ್ರಾಹಕರ ವಿಶ್ವಾಸದಲ್ಲಿ ಸ್ಥಿರತೆಗೆ ಕಾರಣವಾಗಿದೆ.
ಆದರೆ ಭಾರತವು ಒಂದು ವೇಳೆ ಕೋವಿಡ್ -19 ರ ಮತ್ತೊಂದು ಅಲೆಯನ್ನು ಎದುರಿಸಿದರೆ ಗ್ರಾಹಕರ ಭಾವನೆ ಬೆದರಿಕೆಯನ್ನು ಎದುರಿಸುತ್ತದೆ, ಇದು ಆರ್ಥಿಕ ಚಟುವಟಿಕೆ ಮತ್ತು ಗ್ರಾಹಕರ ಬೇಡಿಕೆಯನ್ನು ಕುಂಠಿತಗೊಳಿಸುತ್ತದೆ. ಇದು ಮುಂದಿನ 12-18 ತಿಂಗಳಲ್ಲಿ ಭಾರತೀಯ ಕಂಪನಿಗಳಿಗೆ 15-20% ಕ್ಕಿಂತ ಕಡಿಮೆ ಬೆಳವಣಿಗೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.