ಮೈಸೂರಿನ ಸಾಮಾಜಿಕ ನ್ಯಾಯ ವೇದಿಕೆಯ ಡಾ ಅನಂದಕುಮಾರ ತಮ್ಮ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ದೇವದಾಸಿ ಹೆಣ್ಣುಮಕ್ಕಳ ಸಂಕಟಗಳ ಕುರಿತು ಪಿಎಚ್ಡಿ ಮಾಡಿ, ಮಾದಿಗರ ಮೀಸಲಾತಿ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಡಾ ಅನಂದಕುಮಾರ್ ಪೇಜಾವರ ಶ್ರೀಗಳ ನಿಕಟವರ್ತಿಯಾಗಿದ್ದರು. ಮುಂದಿನದು ಅವರ ಮಾತುಗಳು …
ಸರಿ ಸುಮಾರು ಏಂಟೊಂಬತ್ತು ವರುಷಗಳ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗ್ರಾಮ ಒಂದರಲ್ಲಿ ಇಪ್ಪತ್ತಕ್ಕೂ ಅಧಿಕ ಮನೆಗಳನ್ನು ಬಡ್ಡಿ ಲೇವಾದೇವಿಯ ಸವರ್ಣೀಯ ವ್ಯಕ್ತಿಯೊಬ್ಬರ ದಬ್ಬಾಳಿಕೆಯಿಂದ ಪೇಜಾವರ ಶ್ರೀಗಳು ಕಾಪಾಡಿದ್ದು ನೆನಪಾಗುತ್ತಿದೆ.
ಸಾಲದ ಹಣಕ್ಕೆ ಒತ್ತೆಯಾದ ಮನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯದ ಆದೇಶವನ್ನು ಪಡೆದಿರುತ್ತಾನೆ. ಊರ ಹಬ್ಬದಲ್ಲಿ ತಮಟೆ ಬಡಿಯುತ್ತಾ ಕುಣಿಯುವಾಗ ಅಸ್ಪೃಶ್ಯರ ಮೈತಾಕಿದ ನೆಪ ತೆಗೆದು ಗ್ರಾಮದ ಅಸ್ಪ್ರಶ್ಯರಿಗೆ ಹಲ್ಲೆ ಮಾಡಿ ಮನೆಗಳನ್ನು ಬಿಟ್ಟು ಹೋಗುವಂತೆ ಮಾಡಲಾಗುತ್ತದೆ.
ದಲಿತ ಸಂಘಟನೆಗಳನ್ನು ಆ ಲೇವಾದೇವಿಗಾರನು ಸಂಭಾಳಿಸಿಕೊಳ್ಳುವುದರಿಂದ ಅಸ್ಪ್ರಶ್ಯರಿಗೆ ರಕ್ಷಣೆ ಸಿಗುವುದಿಲ್ಲ. ಆ ಗ್ರಾಮಕ್ಕೆ ಆಗ ಬಿಎಸ್ಪಿ ರಾಜ್ಯಾಧ್ಯಕ್ಷರು ಸಹ ಅಂದು ಭೇಟಿ ನೀಡಿ ಹೋಗಿದ್ದರು.
ದಿನಗಳು ಕಳೆಯುತ್ತಿದ್ದರೂ ಸಂತ್ರಸ್ತರಿಗೆ ರಕ್ಷಣೆ ಮತ್ತು ನ್ಯಾಯ ದೊರಕುವ ಲಕ್ಷಣಗಳು ಗೋಚರಿಸುವುದಿಲ್ಲ.
ಅಂದು ಪೇಜಾವರ ಶ್ರೀಗಳಿಗೆ ಪೋನ್ ಮುಖಾಂತರ ದಲಿತರ ಮೇಲಾಗುತ್ತಿರುವ ದೌರ್ಜನ್ಯವನ್ನು ನಾನೇ ವಿವರಿಸುತ್ತಿದ್ದಾಗ ಪೇಜಾವರ ಶ್ರೀಗಳು ಅ ಗ್ರಾಮಕ್ಕೆ ಭೇಟಿ ನೀಡುವುದಾಗಿ ನನಗೆ ಮಾತು ಕೊಟ್ಟರು . ಕೊಟ್ಟ ಮಾತನ್ನು ಉಳಿಸಿಕೊಂಡರು.
ಅವರೊಂದಿಗೆ ಆ ಗ್ರಾಮಕ್ಕೆ ಅವರ ವಾಹನದಲ್ಲೇ ಮೈಸೂರಿನಿಂದ ಪ್ರಯಾಣಿಸುವಾಗ ನನ್ನ ಪಿಎಚ್ ಡಿ ಸಂಶೋಧನೆಗೆ ಮಾರ್ಗದರ್ಶಕರಾಗಿದ್ದ ಡಾ ಗುರುರಾಜ ಬೇಡಿಕರ್ ಸರ್ ಅವರು ಬೆಳಗಾಂ ವಿಶ್ವವಿದ್ಯಾಲಯಕ್ಕೆ ವರ್ಗಾವಣೆ ಬಯಸಿರುವುದಕ್ಕೆ ಸಹಕರಿಸುವಂತೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಅನಂತನ್ ಅವರಿಗೆ ಶಿಫಾರಸ್ಸು ಮಾಡುವ ವಿಷಯ ಸೇರಿದಂತೆ ಅನೇಕ ಸಾಮಾಜಿಕ ಕಾಳಜಿಯ ವಿಷಯವಾಗಿ ಸಮಾಲೋಚಿಸಿದರು.
ಶ್ರೀಗಳು ಗ್ರಾಮಕ್ಕೆ ಭೇಟಿ ನೀಡಿದಾಗ ಈಗ ಶಾಸಕರಾಗಿರುವ ಡಿ. ಸಿ. ತಮ್ಮಣ್ಣ ಸಹಿತವಾಗಿ ಅನೇಕ ಮುಖಂಡರು ಸಂತ್ರಸ್ತ ಅಸ್ಪ್ರಶ್ಯರ ಕೇರಿಯಲ್ಲಿ ಶ್ರೀಗಳನ್ನು ಸ್ವಾಗತಿಸಿದ್ದರು. ಅಲ್ಲದೆ ಸವರ್ಣೀಯ ರಾಜಕಾರಣಿಗಳೇ ಅಸ್ಪ್ರಶ್ಯರ ರಕ್ಷಣೆ ಮತ್ತು ಅ ಸಾಲ ಮರುಪಾವತಿಸಿ ಮನೆ ಉಳಿಸಿಕೊಡುವುದಾಗಿ ಪೇಜಾವರ ಶ್ರೀಗಳಿಗೆ ವಾಗ್ದಾನ ಮಾಡುತ್ತಾರೆ.
ಎರಡ್ಮೂರು ದಿನಗಳಲ್ಲಿ ಸಮಾಜ ಕಲ್ಯಾಣ ಸಚಿವರು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಸಮಸ್ಯೆ ತಿಳಿಯಾಗುತ್ತದೆ. ಇದು ನನ್ನ ಪ್ರತ್ಯಕ್ಷ ಅನುಭವ.
✍️ ವಾದಿರಾಜ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.