ದುಬೈ: ಭಾರತೀಯ ವಾಯುಪಡೆಯ ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನಗಳು ಭಾನುವಾರ ದುಬೈನಲ್ಲಿ ನಡೆದ ದುಬೈ ವೈಮಾನಿಕ ಪ್ರದರ್ಶನದಲ್ಲಿ ತಮ್ಮ ಅತ್ಯದ್ಭುತ ಹಾರುವ ಕೌಶಲ್ಯವನ್ನು ಪ್ರದರ್ಶಿಸಿವೆ. ಈ ಲಘು ಯುದ್ಧ ವಿಮಾನ (ಎಲ್ಸಿಎ)ದ ಹೊರತಾಗಿ, ಸಾರಂಗ್ ಹೆಲಿಕಾಪ್ಟರ್ ಡಿಸ್ಪ್ಲೇ ತಂಡವು ದುಬೈನ ಅಲ್ ಮಕ್ತೌಮ್ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಜನಪ್ರಿಯ ಏರ್ ಶೋನಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ತೇಜಸ್ ವಿಮಾನವು ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ಶುಕ್ರವಾರ ದುಬೈ ತಲುಪಿತ್ತು ಮತ್ತು ಭಾನುವಾರ ತನ್ನ ಕುಶಲತೆ ಮತ್ತು ತನ್ನ ಉನ್ನತ ಹಾರುವ ಸಾಮರ್ಥ್ಯವನ್ನು ಅದು ಪ್ರದರ್ಶಿಸಿದೆ.
ಆದದೆ, ದುಬೈ ಏರ್ ಶೋನಲ್ಲಿ ಭಾರತ ಅಭಿವೃದ್ಧಿಪಡಿಸಿದ ತೇಜಸ್ ವಿಮಾನದ ಉಪಸ್ಥಿತಿಯು ಪಾಕಿಸ್ಥಾನಿಯರಿಗೆ ಅಸೂಯೆ ತಂದಿದೆ. ನೆರೆಯ ದೇಶದ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತೇಜಸ್ ಬಗ್ಗೆ ಮಾಡಿರುವ ಟ್ವಿಟ್ಗಳೇ ಇದಕ್ಕೆ ಸಾಕ್ಷಿ. ಪಾಕಿಸ್ಥಾನದ ರಕ್ಷಣಾ ಪತ್ರಕರ್ತರೂ ಸೇರಿದಂತೆ ಕೆಲವು ಅಧಿಕೃತ ಟ್ವಿಟರ್ ಖಾತೆ ಹೊಂದಿದವರು ಭಾರತೀಯ ಯುದ್ಧ ವಿಮಾನವನ್ನು ಅಪಹಾಸ್ಯ ಮಾಡುವ ಮೂಲಕ ತಮ್ಮ ಹೊಟ್ಟೆ ಕಿಚ್ಚನ್ನು ತಣ್ಣಗಾಗಿಸಿದ್ದಾರೆ.
ದುಬೈ ಏರ್ ಶೋನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ತೇಜಸ್ನ ವಿನ್ಯಾಸವನ್ನು ಅವರುಗಳು ಸಮೋಸಕ್ಕೆ ಹೋಲಿಸಿದ್ದಾರೆ.
ಪಾಕಿಸ್ಥಾನಿ ಯುದ್ಧ ವಿಮಾನಗಳು ಏರ್ಶೋನಲ್ಲಿ ಇಲ್ಲದೇ ಇರುವುದು ಕೂಡ ಅವರ ಹೊಟ್ಟೆಕಿಚ್ಚಿಗೆ ಒಂದು ಕಾರಣವಾಗಿರಬಹುದು.
ಯುಎಇ ಸರ್ಕಾರವು ದುಬೈ ಏರ್ ಶೋನಲ್ಲಿ ಭಾಗವಹಿಸಲು ಭಾರತೀಯ ವಾಯುಸೇನೆಗೆ ಆಹ್ವಾನವನ್ನು ಕಳುಹಿಸಿತ್ತು. ಜೊತೆಗೆ ಪ್ರಪಂಚದಾದ್ಯಂತದ ಕೆಲವು ಅತ್ಯುತ್ತಮ ಏರೋಬ್ಯಾಟಿಕ್ಸ್ ಮತ್ತು ಪ್ರದರ್ಶನ ತಂಡಗಳಿಗೂ ಆಹ್ವಾನ ನೀಡಿತ್ತು. ಇವುಗಳಲ್ಲಿ ಸೌದಿ ಹಾಕ್ಸ್, ರಷ್ಯನ್ ನೈಟ್ಸ್ ಮತ್ತು ಯುಎಇಯ ಅಲ್ ಫರ್ಸಾನ್ ಸೇರಿವೆ.
It’s look like bat 🦇 flying in day light 😏 https://t.co/k5TvymWZyk
— Javeria Siddique (@javerias) November 14, 2021
Ketchup with Samosa or hari chatni…?? 🤷🏻♀️#TejasswiPrakash #Dubai #DubaiAirshow2021 pic.twitter.com/y2q71RHrs8
— Sumaira Khan (@sumrkhan1) November 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.