ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರ ಮಾನವೀಯ ಕಾರ್ಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ದರೋಡೆಕೋರರಿಂದಾಗಿ ಹಣ ಕಳೆದುಕೊಂಡ ವೃದ್ಧ ಬೀದಿ ಬದಿ ವ್ಯಾಪಾರಿಯ ನೆರವಿಗೆ ಆಗಮಿಸಿರುವ ಪೊಲೀಸ್ ಅಧಿಕಾರಿ, ತಮ್ಮ ಸ್ವಂತ ಹಣ 1 ಲಕ್ಷ ರೂಪಾಯಿಯನ್ನು ನೀಡಿ ಸಂತೈಸಿದ್ದಾರೆ.
ಕಾಶ್ಮೀರದ ಬೀದಿ ವ್ಯಾಪಾರಿಯೊಬ್ಬರು ಜೀವಮಾನವಿಡೀ ದುಡಿದು ಒಂದಿಷ್ಟು ಹಣವನ್ನು ತನ್ನ ಅಂತ್ಯಕ್ರಿಯೆಗಾಗಿ ಕೂಡಿಟ್ಟುಕೊಂಡಿದ್ದರು, ದರೋಡೆಕೋರರು ಆ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಇದನ್ನು ಅರಿತ ಶ್ರೀನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆ ಹಿರಿಯ ಬೀದಿ ವ್ಯಾಪಾರಿಯ ನೆರವಿಗೆ ಧಾವಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶ್ರೀನಗರದ ಬೋಹ್ರಿ ಕಡಲ್ ಪ್ರದೇಶದಲ್ಲಿ ರಸ್ತೆ ಬದಿ ಚನ್ನಾ ಮಾರಾಟ ಮಾಡುತ್ತಿದ್ದ 90 ವರ್ಷದ ಅಬ್ದುಲ್ ರೆಹಮಾನ್ ಅವರ ವೈಯಕ್ತಿಕ ಉಳಿತಾಯದ ಹಣವನ್ನು ಶನಿವಾರ ಕಳ್ಳರು ದೋಚಿದ್ದಾರೆ. ಅವರು ತಮ್ಮ ಅಂತಿಮ ಸಂಸ್ಕಾರಕ್ಕಾಗಿ ಈ ಹಣವನ್ನು ಕೂಡಿಟ್ಟುಕೊಂಡಿದ್ದರು.
ಒಂಟಿಯಾಗಿ ವಾಸಿಸುತ್ತಿದ್ದ ರೆಹಮಾನ್ಗೆ ದರೋಡೆಕೋರರು ಥಳಿಸಿ ಅವರ ಬಳಿಯಲ್ಲಿದ್ದ 1 ಲಕ್ಷ ರೂ.ಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಅವರ ಸಂಕಷ್ಟದಿಂದ ಮನನೊಂದ ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಚೌಧರಿ ಅವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ರೆಹಮಾನ್ಗೆ ತಮ್ಮ ಜೇಬಿನಿಂದ 1 ಲಕ್ಷ ರೂಪಾಯಿ ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.