ನವದೆಹಲಿ: ಅಫ್ಘಾನಿಸ್ಥಾನಕ್ಕೆ ಮಾನವೀಯ ನೆಲೆಯಲ್ಲಿ ಆಹಾರ ಬೆಂಬಲ ನೀಡುವಂತೆ ಮಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವು ಭಾರತದ ಜೊತೆ ಮಾತುಕತೆ ನಡೆಯುಸುತ್ತಿದೆ ಎಂದು ಅಫ್ಘಾನಿಸ್ಥಾನದ ಡಬ್ಲ್ಯುಎಫ್ಪಿ ಹೆಡ್ ಪ್ರೋಗ್ರಾಂ ಸಿಸಿಲಿಯಾ ಗಾರ್ಜಾನ್ ಹೇಳಿದ್ದಾರೆ.
ಯುದ್ಧ ಪೀಡಿತ ದೇಶದ ಕುಟುಂಬಗಳಿಗೆ ಸಹಾಯ ಮಾಡಲು ಎಲ್ಲ ದೇಶಗಳನ್ನು ಅವರು ಒತ್ತಾಯಿಸಿದ್ದಾರೆ. ವಿಶ್ವದ ಅತಿದೊಡ್ಡ ಮಾನವೀಯ ಬಿಕ್ಕಟ್ಟನ್ನು ಅಫ್ಘಾನ್ ಎದುರಿಸುತ್ತಿದೆ ಎಂದಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಆಹಾರ ಬಿಕ್ಕಟ್ಟಿನ ವ್ಯಾಪ್ತಿ ಮತ್ತು ಸ್ವರೂಪದ ಬಗ್ಗೆ ಮಾತನಾಡಿರುವ ಗಾರ್ಜನ್, ಕುಟುಂಬಗಳಿಗೆ ಆಹಾರದ ಪೂರೈಕೆಗೆ ಹಲವಾರು ಕಾರಣಗಳಿಂದಾಗಿ ತೀವ್ರವಾಗಿ ಅಡಚಣೆಯಾಗಿದೆ ಎಂದು ಹೇಳಿದರು
ಭಾರತ ಸೇರಿದಂತೆ ಎಲ್ಲಾ ದೇಶಗಳು ಅಫ್ಘಾನಿಸ್ಥಾನದ ಕುಟುಂಬಗಳಿಗೆ ಸಹಾಯ ಮಾಡಲು ತಮ್ಮ ಶಕ್ತಿಯ ಅನುಸಾರ ಎಲ್ಲಾ ಪ್ರಯತ್ನವನ್ನು ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.
“ಆಹಾರ ಅಥವಾ ಇನ್ನಿತರ ವಸ್ತುಗಳು ಇಲ್ಲದೆ ಹೆಚ್ಚಿನ ಸಂಖ್ಯೆಯ ಆಫ್ಘನ್ನರು ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಯನ್ನು ಹುಡುಕುತ್ತಾ ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡುವ ಸಾಧ್ಯತೆಯಿದೆ. ಅಫ್ಘಾನಿಸ್ಥಾನ ನಿಜವಾಗಿಯೂ ವಿಶ್ವದ ಅತಿದೊಡ್ಡ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದು ಇಥಿಯೋಪಿಯಾ, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮೆನ್ ಅನ್ನೂ ಮೀರಿಸುತ್ತಿದೆ. ಈ ದುರಂತವನ್ನು ತಡೆಯಲು ಇಡೀ ಜಗತ್ತು ಏನಾದರೂ ಮಾಡಲೇ ಬೇಕಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.