ನವದೆಹಲಿ: ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸೋಮವಾರ ಲಾಜಿಸ್ಟಿಕ್ಸ್ ಈಸ್ ಎಕ್ರಾಸ್ ಡಿಫರೆಂಟ್ ಸ್ಟೇಟ್ಸ್(ಲೀಡ್ಸ್) ವರದಿ 2021 ಅನ್ನು ಬಿಡುಗಡೆ ಮಾಡಿದ್ದಾರೆ.
ನವದೆಹಲಿಯಲ್ಲಿ ಲೀಡ್ಸ್ ವರದಿ ಬಿಡುಗಡೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವರದಿಯು ರಾಜ್ಯಗಳನ್ನು ಅವುಗಳ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯ ಆಧಾರದ ಮೇಲೆ ಶ್ರೇಣೀಕರಿಸುತ್ತದೆ, ಸಂಬಂಧಿತರು ಎದುರಿಸುತ್ತಿರುವ ಪ್ರಮುಖ ಲಾಜಿಸ್ಟಿಕ್ಸ್-ಸಂಬಂಧಿತ ಸವಾಲುಗಳನ್ನು ಎತ್ತಿ ತೋರಿಸುತ್ತದೆ ಮತ್ತು ಸೂಚಿತ ಶಿಫಾರಸುಗಳನ್ನು ಒಳಗೊಂಡಿದೆ ಎಂದಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯ ದಕ್ಷತೆಯ ಮೇಲೆ ಶ್ರೇಯಾಂಕ ನೀಡುವ ಮುಖ್ಯ ಉದ್ದೇಶದೊಂದಿಗೆ 2018 ರಲ್ಲಿ ಮೊದಲ ಬಾರಿಗೆ ‘ಲಾಜಿಸ್ಟಿಕ್ಸ್ ಈಸ್ ಎಕ್ರಾಸ್ ಡಿಫರೆಂಟ್ ಸ್ಟೇಟ್ಸ್ (ಲೀಡ್ಸ್)- ವಿವಿಧ ರಾಜ್ಯಾಗಳಾದ್ಯಂತ ಸರಕು ಸುಲಲಿತತೆ’ ಎಂಬ ಅಧ್ಯಯನವನ್ನು ಪ್ರಾರಂಭಿಸಿತು.
2021ರ ಲೀಡ್ಸ್ ವರದಿಯಲ್ಲಿ ಗುಜರಾತ್, ಹರಿಯಾಣ ಮತ್ತು ಪಂಜಾಬ್ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ.
ಅಲ್ಲದೆ, ಉತ್ತರ ಪ್ರದೇಶವು 2019 ರಿಂದ ಏಳು ಶ್ರೇಯಾಂಕಗಳನ್ನು ಹೆಚ್ಚಿಸಿದೆ, ಇದು ಎಲ್ಲಾ ರಾಜ್ಯಗಳ ಪೈಕಿ ಅತ್ಯಧಿಕವಾಗಿದೆ. ಜೊತೆಗೆ, ಉತ್ತರಾಖಂಡ ಮತ್ತು ಜಾರ್ಖಂಡ್ದ 2019 ರ ಲೀಡ್ಸ್ ಶ್ರೇಯಾಂಕಕ್ಕೆ ಹೋಲಿಸಿದರೆ ತಮ್ಮ ಶ್ರೇಯಾಂಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿವೆ ಮತ್ತು ಉನ್ನತ ಸುಧಾರಣೆ ಕಂಡ ಹೊರಹೊಮ್ಮಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.