ನವದೆಹಲಿ: ತುರ್ತು ಬಳಕೆಯ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ತಂಡದಿಂದ ಕೋವ್ಯಾಕ್ಸಿನ್ ಲಸಿಕೆಗೆ ಹಸಿರು ನಿಶಾನೆ ದೊರೆತಿದೆ.
ತಾಂತ್ರಿಕ ಸಲಹಾ ಗುಂಪು ಭಾರತ್ ಬಯೋಟೆಕ್ನಿಂದ ಕೆಲವು ಹೆಚ್ಚುವರಿ ಸ್ಪಷ್ಟೀಕರಣವನ್ನು ಕೋರಿದ್ದರಿಂದ ತುರ್ತು ಪಟ್ಟಿಯನ್ನು ಕಳೆದ ತಿಂಗಳು ವಿಳಂಬಗೊಳಿಸಲಾಯಿತು. ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ತಾಂತ್ರಿಕ ಸಲಹಾ ಗುಂಪು ಬುಧವಾರ ಸಭೆ ಸೇರಿತ್ತು ಮತ್ತು 18 ವರ್ಷ ಮೇಲ್ಪಟ್ಟವರಿಗೆ ತುರ್ತು ಬಳಕೆಯ ಪಟ್ಟಿಗಾಗಿ ಕೋವ್ಯಾಕ್ಸಿನ್ ಅನ್ನು ಶಿಫಾರಸು ಮಾಡಿದೆ.
ಈ ಮೂಲಕ ಭಾರತದ ಅಪ್ಪಟ ದೇಶೀಯ ಲಸಿಕೆ ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಯನ್ನು ಪಡೆಯುವ ಸನಿಹಕ್ಕೆ ಬಂದಿದೆ. ಇದು ಕೋವಿಡ್-19 ವಿರುದ್ಧದ ವ್ಯಾಕ್ಸಿನೇಷನ್ನಲ್ಲಿ ಭಾರತದ ಪ್ರಯಾಣಕ್ಕೆ ಇದು ಪ್ರಮುಖ ವಿಜಯವಾಗಿದೆ.
ಕೋವ್ಯಾಕ್ಸಿನ್ ಸಂಪೂರ್ಣವಾಗಿ ‘ಮೇಡ್ ಇನ್ ಇಂಡಿಯಾ’ ಲಸಿಕೆ ಯಾಗಿದ್ದು, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದನ್ನು ಅಭಿವೃದ್ಧಿಪಡಿಸಿದೆ.
ಕೋವ್ಯಾಕ್ಸಿನ್ ಕೋವಿಡ್ ರೋಗಲಕ್ಷಣದ ವಿರುದ್ಧ 77.8 ಶೇಕಡಾ ಪರಿಣಾಮಕಾರಿತ್ವವನ್ನು ಮತ್ತು ಹೊಸ ಡೆಲ್ಟಾ ರೂಪಾಂತರದ ವಿರುದ್ಧ 65.2 ಶೇಕಡಾ ರಕ್ಷಣೆಯನ್ನು ಪ್ರದರ್ಶಿಸಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಬೀದರ್, Pfizer-BioNTech, ಅಸ್ಟ್ರಾಜೆನೆಕಾ, ಜಾನ್ಸನ್ & ಜಾನ್ಸನ್ನ ಲಸಿಕೆ, ಮಾಡೆರ್ನಾ, ಸಿನೊಫಾರ್ಮ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ.
Congratulations India for Emergency Use Listing of its indigenously produced #COVID19 vaccine COVAXIN
@MoHFW_INDIA @PIB_India @ANI pic.twitter.com/hyZrLcCRMs
— WHO South-East Asia (@WHOSEARO) November 3, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.