ಮಂಗಳೂರು: ಅತಿ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿಗೂ ಸ್ಮಾರ್ಟ್ ಸಿಟಿ ಭಾಗ್ಯ ದೊರೆತಿದೆ. ಕೇಂದ್ರ ಇಂದು ಬಿಡುಗಡೆ ಮಾಡಿರುವ 98 ಸ್ಮಾರ್ಟ್ ಸಿಟಿ ಯೋಜನೆಗೊಳಪಟ್ಟ ನಗರಗಳ ಪೈಕಿ ಮಂಗಳೂರು ಕೂಡ ಒಂದು.
ನಗರಗಳಿಗೆ ಪ್ರಮುಖ ಮೂಲಸೌಕರ್ಯವನ್ನು ಒದಗಿಸುವುದು, ಡಿಜಟಲೀಕರಣ, ಇ-ಆಡಳಿತ, ಜನರ ಜೀವನ ಮಟ್ಟವನ್ನು ಸುಧಾರಿಸುವುದು, ಸ್ವಚ್ಛ ಮತ್ತು ಸುಸ್ಥಿರ ಪರಿಸರ, ಸ್ಮಾರ್ಟ್ ಪರಿಹಾರಗಳನ್ನೊಳಗೊಂಡ ವಾತಾವರಣವನ್ನು ಸೃಷ್ಟಿಸುವುದು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಉದ್ದೇಶ.
ಸಮರ್ಪಕ ನೀರು ಸರಬರಾಜು, ಸಮರ್ಪಕ ವಿದ್ಯುತ್ ಪೂರೈಕೆ, ಘನ ತ್ಯಾಜ್ಯ ನಿರ್ವಹಣೆ, ಸಮರ್ಥ ನಗರ ಚಲನಶೀಲತೆ, ಸಾರಿಗೆ ವ್ಯವಸ್ಥೆ, ಡಿಜಟಲೀಕರಣ, ಐಟಿ ಸಂಪರ್ಕ, ಉತ್ತಮ ಇ-ಆಡಳಿತ, ನಾಗರಿಕರ ಪಾಲ್ಗೊಳ್ಳುವಿಕೆ, ಮಹಿಳೆಯರು, ಮಕ್ಕಳು, ಹಿರಿಯರ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣ ಇವುಗಳು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಗುರಿ. ಇದು ಆರ್ಥಿಕ ಪ್ರಗತಿ ಮತ್ತು ಜೀವನ ಜೀವನ ಮಟ್ಟ ಸುಧಾರಣೆಗೆ ಪೂರಕವಾಗಲಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಕರ್ನಾಟಕದ ಆರು ನಗರಗಳ ಪೈಕಿ ಮಂಗಳೂರು ಕೂಡ ಆಯ್ಕೆಯಾಗಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.