ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಗತ್ತಿನಾದ್ಯಂತ ಯಾವುದೇ ಪ್ರದೇಶದ ಸೌರಶಕ್ತಿ ಸಾಮರ್ಥ್ಯವನ್ನು ಅಳೆಯುವ ಸೌರಶಕ್ತಿ ಕ್ಯಾಲ್ಕುಲೇಟರ್ ಅಪ್ಲಿಕೇಶನ್ ಅನ್ನು ಶೀಘ್ರದಲ್ಲೇ ಜಗತ್ತಿಗೆ ನೀಡಲಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗ್ಲಾಸ್ಗೋದಲ್ಲಿ ಕ್ಲೀನ್ ಟೆಕ್ನಾಲಜಿ ಆವಿಷ್ಕಾರವನ್ನು ವೇಗಗೊಳಿಸುವುದು ಮತ್ತು ಜಾಗತಿಕ COP-26 ಶೃಂಗಸಭೆಯ ನಿಯೋಜನೆ ಕುರಿತು ಸೆಷನ್ನಲ್ಲಿ ಮಾತನಾಡಿದ ಮೋದಿ, ಈ ಕ್ಯಾಲ್ಕುಲೇಟರ್ ಮೂಲಕ ಉಪಗ್ರಹ ದತ್ತಾಂಶದ ಆಧಾರದ ಮೇಲೆ ವಿಶ್ವದ ಯಾವುದೇ ಸ್ಥಳದ ಸೌರಶಕ್ತಿ ಸಾಮರ್ಥ್ಯವನ್ನು ಲೆಕ್ಕಹಾಕಬಹುದು. ಸೌರ ಯೋಜನೆಗಳ ಸ್ಥಳವನ್ನು ನಿರ್ಧರಿಸಲು ಈ ಅಪ್ಲಿಕೇಶನ್ ಉಪಯುಕ್ತವಾಗಿದೆ ಮತ್ತು ‘ಒಂದು ಸೂರ್ಯ, ಒಂದು ಪ್ರಪಂಚ ಮತ್ತು ಒಂದು ಗ್ರಿಡ್’ ಉಪಕ್ರಮವನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
Speaking at the session on ‘Accelerating Clean Technology Innovation and Deployment.’ https://t.co/4bvexwZswy
— Narendra Modi (@narendramodi) November 2, 2021
ಸೌರ ಶಕ್ತಿಯು ಸಂಪೂರ್ಣವಾಗಿ ಶುದ್ಧ ಮತ್ತು ಸುಸ್ಥಿರವಾಗಿದೆ ಮತ್ತು ಈ ಶಕ್ತಿಯು ಹಗಲಿನ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ. ‘ಒಂದು ಸೂರ್ಯ, ಒಂದು ಪ್ರಪಂಚ ಮತ್ತು ಒಂದು ಗ್ರಿಡ್’ ಈ ಸಮಸ್ಯೆಗೆ ಪರಿಹಾರವಾಗಿದೆ ಮತ್ತು ವಿಶ್ವಾದ್ಯಂತ ಗ್ರಿಡ್ ಮೂಲಕ ಶುದ್ಧ ಶಕ್ತಿಯನ್ನು ಎಲ್ಲಿಯಾದರೂ ಮತ್ತು ಯಾವಾಗ ಬೇಕಾದರೂ ರವಾನಿಸಬಹುದು ಎಂದು ಅವರು ಹೇಳಿದರು.
ಈ ಸೃಜನಾತ್ಮಕ ಉಪಕ್ರಮವು ಇಂಗಾಲದ ಹೆಜ್ಜೆಗುರುತು ಮತ್ತು ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ವಿವಿಧ ಪ್ರದೇಶಗಳು ಮತ್ತು ದೇಶಗಳ ನಡುವಿನ ಸಹಕಾರವನ್ನು ವೃದ್ಧಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.