ನವದೆಹಲಿ: ದೇಶದ ಶೇಕಡಾ 35ರಷ್ಟು ಅರ್ಹ ಜನಸಂಖ್ಯೆ ಕೋವಿಡ್-19 ಲಸಿಕೆಯ ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮಾನ್ಸೂಕ್ ಮಾಂಡವೀಯ ಹೇಳಿದ್ದಾರೆ. ಇದೊಂದು ಅಸಾಧಾರಣ ಸಾಧನೆ ಎಂದು ಬಣ್ಣಿಸಿದ ಅವರು, ಭಾರತವು ವೈರಸ್ ಅನ್ನು ಸೋಲಿಸುವ ಹಾದಿಯಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಎಂದಿದ್ದಾರೆ.
ಸೋಮವಾರ ಬೆಳಗ್ಗೆ 7 ಗಂಟೆಗೆ ನವೀಕರಿಸಲಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ನೀಡಲಾದ ಒಟ್ಟು ಕೋವಿಡ್ ಲಸಿಕೆ ಡೋಸ್ 106.31 ಕೋಟಿ ಮೀರಿದೆ.
”ಅಸಾಧಾರಣ ರಾಷ್ಟ್ರದ ಅಸಾಧಾರಣ ಸಾಧನೆ! ಭಾರತವು 1 ನೇ ಕೋವಿಡ್-19 ಲಸಿಕೆ ಡೋಸ್ ಅನ್ನು ಅರ್ಹ ಜನಸಂಖ್ಯೆಯ ಶೇಕಡಾ 78 ರಷ್ಟು ಮಂದಿಗೆ ಮತ್ತು ಎರಡನೇ ಡೋಸ್ ಅನ್ನು 35 ಶೇಕಡಾ ಅರ್ಹ ಜನರಿಗೆ ನೀಡಿದೆ. ವೈರಸ್ ಅನ್ನು ಸೋಲಿಸುವ ಹಾದಿಯಲ್ಲಿ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ. ಎಲ್ಲರಿಗೂ ಅಭಿನಂದನೆಗಳು!” ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.
ಭಾರತದ ಕೋವಿಡ್-19 ಪ್ರಕರಣಗಳ ಸಂಖ್ಯೆ ಸೋಮವಾರ 3,42,85,814 ಕ್ಕೆ ತಲುಪಿದ್ದು, ಒಂದು ದಿನದಲ್ಲಿ 12,514 ರಷ್ಟು ಪ್ರಕರಣ ದಾಖಲಾಗಿದೆ. ಅದೇ ಅವಧಿಯಲ್ಲಿ 251 ಸಾವುಗಳು ಸಂಭವಿಸಿದ್ದು, ಸಾವಿನ ಸಂಖ್ಯೆಯನ್ನು 4,58,437 ಕ್ಕೆ ಏರಿದೆ.
An extraordinary feat of an extraordinary nation!
India has administered 1st #COVID19 vaccine dose to 7⃣8⃣% of the eligible population and 2nd dose to 3⃣5⃣% of the eligible people.
Congratulations to all as we rapidly progress on our path to defeat the virus! pic.twitter.com/CLveOMJVak
— Dr Mansukh Mandaviya (@mansukhmandviya) November 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.