ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರೋಮ್ನಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡಿದ ಅವರು, ಮುಂದಿನ ವರ್ಷ ಭಾರತವು 5 ಬಿಲಿಯನ್ ಕೋವಿಡ್-19 ಲಸಿಕೆ ಡೋಸ್ಗಳನ್ನು ಉತ್ಪಾದಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದರು.
‘ಗ್ಲೋಬಲ್ ಎಕಾನಮಿ ಮತ್ತು ಗ್ಲೋಬಲ್ ಹೆಲ್ತ್’ ಕುರಿತ ಅಧಿವೇಶನದಲ್ಲಿ ಪ್ರಧಾನಿ ಮೋದಿಯವರು ಮಾತನಾಡಿ, “ಭಾರತವು ತನ್ನ ಜಾಗತಿಕ ಜವಾಬ್ದಾರಿಗಳ ಬಗ್ಗೆ ಯಾವಾಗಲೂ ಗಂಭೀರವಾಗಿರುತ್ತದೆ. ಇಂದು, ಈ G-20 ವೇದಿಕೆಯಲ್ಲಿ, ಮುಂದಿನ ವರ್ಷ ಪ್ರಪಂಚಕ್ಕೆ 5 ಬಿಲಿಯನ್ಗೂ ಹೆಚ್ಚು ಲಸಿಕೆ ಡೋಸ್ಗಳನ್ನು ಉತ್ಪಾದಿಸಲು ಭಾರತ ತಯಾರಿ ನಡೆಸುತ್ತಿದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಭಾರತದ ಈ ಬದ್ಧತೆಯು ಸಾಂಕ್ರಾಮಿಕ ವನ್ನು ತಡೆಗಟ್ಟುವಲ್ಲಿ ಬಹಳ ದೂರ ಸಾಗಲಿದೆ. ಹೀಗಾಗಿ, ಭಾರತೀಯ ಲಸಿಕೆಗಳನ್ನು WHO ಶೀಘ್ರವಾಗಿ ಗುರುತಿಸುವುದು ಅವಶ್ಯಕ ” ಎಂದು ಹೇಳಿದರು.
2020 ರಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರದ ಮೊದಲ ವರ್ಚುವಲ್ ಅಲ್ಲದ G20 ಶೃಂಗಸಭೆ ಇದಾಗಿದೆ. ಕೋವಿಡ್-19 ವಿರುದ್ಧ ಹೋರಾಡಲು, ನಾವೆಲ್ಲರೂ ‘ಒಂದು ಭೂಮಿ – ಒಂದು ಆರೋಗ್ಯ’ದ ಧ್ಯೇಯ ಹೊಂದಬೇಕು ಮತ್ತು ಸಾಂಕ್ರಾಮಿಕದಂತಹ ಯಾವುದೇ ಬಿಕ್ಕಟ್ಟನ್ನು ಎದುರಿಸಲು ಭಾರತವು ಒಂದು ದೃಷ್ಟಿಕೋನವನ್ನು ಮುಂದಿಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭವಿಷ್ಯದಲ್ಲಿ, ಈ ದೃಷ್ಟಿ ಜಗತ್ತಿನಲ್ಲಿ ದೊಡ್ಡ ಶಕ್ತಿಯಾಗಬಹುದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.