ನವದೆಹಲಿ: ಈ ವರ್ಷದ ಗಂಗಾ ಉತ್ಸವವನ್ನು ನವೆಂಬರ್ 1 ರಿಂದ 3 ರವರೆಗೆ ಆಯೋಜಿಸಲಾಗುತ್ತಿದೆ. ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ (NMCG) ಪ್ರತಿ ವರ್ಷ ಗಂಗಾ ಉತ್ಸವವನ್ನು ಆಯೋಜಿಸುತ್ತದೆ. ನವೆಂಬರ್ 4 ರಂದು ಗಂಗಾ ನದಿಯನ್ನು ರಾಷ್ಟ್ರೀಯ ನದಿಯಾಗಿ ಘೋಷಿಸಿದ ಸ್ಮರಣಾರ್ಥ ಈ ಉತ್ಸವವನ್ನು ಆಚರಿಸಲಾಗುತ್ತದೆ.
ಗಂಗಾ ಉತ್ಸವವು ನದಿಗಳ ಉತ್ಸವವಾಗಿದ್ದು, ಇದು ಕೇವಲ ಗಂಗಾ ನದಿ ಮಾತ್ರವಲ್ಲದೆ ದೇಶದಾದ್ಯಂತ ಎಲ್ಲಾ ನದಿಗಳನ್ನು ಆಚರಿಸುತ್ತದೆ. ಗಂಗಾ ನದಿ ಮತ್ತು ಇತರ ಉಪನದಿಗಳ ತಟದಲ್ಲಿನ 150 ಜಿಲ್ಲೆಗಳಲ್ಲಿ ಉತ್ಸವದ ನಿಮಿತ್ತ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಈ ವರ್ಷದ ಆಚರಣೆಗಳು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಗಳ ಭಾಗವಾಗಲಿದೆ.
ಈ ವರ್ಷ, ಗಂಗಾ ಉತ್ಸವವನ್ನು ಭಾರತದ ವಿವಿಧ ನದಿ ಜಲಾನಯನ ಪ್ರದೇಶಗಳಲ್ಲೂ ಆಚರಿಸಲಾಗುತ್ತದೆ.
ಉತ್ಸವವು ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ, ಗಣ್ಯ ವ್ಯಕ್ತಿಗಳೊಂದಿಗೆ ಸಂವಾದಗಳು, ರಸಪ್ರಶ್ನೆಗಳು, ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರದರ್ಶಿಸುವುದು, ಹೆಸರಾಂತ ಕಲಾವಿದರಿಂದ ನೃತ್ಯ ಮತ್ತು ಸಂಗೀತ ಪ್ರದರ್ಶನಗಳು, ಫೋಟೋ ಗ್ಯಾಲರಿಗಳು ಮತ್ತು ಪ್ರದರ್ಶನಗಳನ್ನು ಒಳಗೊಳ್ಳಲಿದೆ.
ಗಂಗಾ ಟಾಸ್ಕ್ ಫೋರ್ಸ್ ನೇತೃತ್ವದ ‘ಗಂಗಾ ಮಶಾಲ್’ ಯಾತ್ರೆಯನ್ನು ದೆಹಲಿಯಿಂದ ಪ್ರಾರಂಭ ಮಾಡಲಾಗುವುದು ಮತ್ತು ಗಂಗಾ ನದಿಯ ಉದ್ದಕ್ಕೂ 23 ನಿಲ್ದಾಣಗಳನ್ನು ಒಳಗೊಂಡ ಮಾರ್ಗದಲ್ಲಿಯಾತ್ರೆ ಸಂಚರಿಸಲಿದೆ. ಗಂಗಾ ತರಂಗ್ ಪೋರ್ಟಲ್ಗೆ ಕಾರ್ಯಕ್ರಮದ ಸಂದರ್ಭದಲ್ಲಿ ಚಾಲನೆ ದೊರೆಯಲಿದೆ.
ರಾಜ್ಯ ಮಟ್ಟದಲ್ಲಿ,75 ವಿವಿಧ ಸ್ಥಳಗಳಲ್ಲಿ 75 ಕಾರ್ಯಕ್ರಮಗಳು, ಗಂಗಾ ದೀಪೋತ್ಸವ, ಘಟ್ಟಗಳ ಉದ್ದಕ್ಕೂ ಗಂಗಾ ಆರತಿಗಳು, ಗಂಗಾ ಪ್ರದರ್ಶನಗಳು, ಮೇರಿ ಗಂಗಾ ಮೇರಿ ಶಾನ್ ಅಭಿಯಾನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
The Ganga Utsav 2021 to begin from 1st to 3rd November, 2021..
3 day festival aims to promote stakeholder engagement & public participation..
Join in the celebrations of the mystical & cultural river Ganga..!#NamamiGange #GangaUtsav #AzadiKaAmritMahotsav pic.twitter.com/93W5JlEhy9
— PIB •Jal Shakti Ministry• #AzadiKaAmritMahotsav (@PIBWater) October 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.