ನವದೆಹಲಿ: ರೋಮ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಭಾರತ ಮತ್ತು ಇಟಲಿ ದ್ವಿಪಕ್ಷೀಯ ಪಾಲುದಾರಿಕೆಯ 2020-2025 ಕ್ರಿಯಾ ಯೋಜನೆಯನ್ನು ಪರಿಶೀಲಿಸಿವೆ ಮತ್ತು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಚರಿಸಿವೆ.
ನವೀಕರಿಸಬಹುದಾದ ಮತ್ತು ಶುದ್ಧ ಇಂಧನದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಉತ್ತೇಜನವನ್ನು ನೀಡಲು ಉಭಯ ದೇಶಗಳು ಇಂಧನ ಪರಿವರ್ತನೆಯ ಮೇಲೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸುವ ಜಂಟಿ ಹೇಳಿಕೆಯನ್ನು ನೀಡಿವೆ ಮತ್ತು ದೊಡ್ಡ ಗಾತ್ರದ ಹಸಿರು ಕಾರಿಡಾರ್ ಯೋಜನೆಗಳು, ಸ್ಮಾರ್ಟ್ ಗ್ರಿಡ್ಗಳು, ಶಕ್ತಿ ಸಂಗ್ರಹ ಪರಿಹಾರಗಳು, ಅನಿಲ ಸಾಗಣೆ, ಅಭಿವೃದ್ಧಿ ಮತ್ತು ಹಸಿರು ಜಲಜನಕದ ನಿಯೋಜನೆ ಮತ್ತು ಜೈವಿಕ ಇಂಧನಗಳ ಪ್ರಚಾರ ಸೇರಿದಂತೆ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲು ಒಪ್ಪಿಕೊಂಡಿವೆ.
ಉಭಯ ನಾಯಕರು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸಲು ಸಹಕರಿಸಲು ನಿರ್ಧರಿಸಿದ್ದಾರೆ. ವಿಶೇಷವಾಗಿ ಶುದ್ಧ ಇಂಧನ ಮತ್ತು ನವೀಕರಿಸಬಹುದಾದ ವಲಯದಲ್ಲಿ ದ್ವಿಮುಖ ಹೂಡಿಕೆಗಳ ಕುರಿತ ಚರ್ಚೆ ನಡೆಸಿದರು.
ಟ್ವೀಟ್ ಮಾಡಿರುವ ಮೋದಿ, ಆರ್ಥಿಕ ಸಂಬಂಧಗಳು, ಸಾಂಸ್ಕೃತಿಕ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಹೆಚ್ಚು ಪರಿಸರ ಸ್ನೇಹಿ ಭೂಮಿಗಾಗಿ ಎರಡು ದೇಶಗಳು ಒಟ್ಟಾಗಿ ಕೆಲಸ ಮಾಡಲು ಹೆಚ್ಚಿನ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ.
Glad to have met PM Mario Draghi in Rome. We talked about ways to strengthen the friendship between India and Italy. There is great potential to further scale up economic linkages, cultural cooperation and for us to work together towards a more environment friendly planet. pic.twitter.com/9sMuDPHSqp
— Narendra Modi (@narendramodi) October 29, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.