ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರು ಶೀಘ್ರದಲ್ಲೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMA) ಮತ್ತು ಕ್ಯೂಆರ್ ಕೋಡ್ ಆಧಾರಿತ ಟಿಕೆಟಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ.
ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಪ್ರತಿ ಮೊದಲ ಹಂತದ ಮೆಟ್ರೋ ನಿಲ್ದಾಣದಲ್ಲಿ ಒಂದು ಅಥವಾ ಎರಡು ಹೊಸ ಸ್ವಯಂ ಚಾಲಿತ ಸಂಗ್ರಹಣ ದ್ವಾರ (Automatic Fare Collection Gates-AFC)ವನ್ನು ಸ್ಥಾಪನೆ ಮಾಡಿದೆ. ಇವುಗಳು ಕ್ಯೂಆರ್ ಕೋಡ್ ಮತ್ತು ಓಪನ್ ಲೂಪ್ ಎನ್ಸಿಎಂಸಿ ಎರಡನ್ನೂ ಸ್ವೀಕರಿಸುತ್ತವೆ. ಈಗಾಗಲೇ ಹಂತ-2 ಮೆಟ್ರೋ ನಿಲ್ದಾಣಗಳು ಎನ್ಸಿಎಂಸಿ ಮತ್ತು ಕ್ಯೂಆರ್ ಆಧಾರಿತ ಎಎಫ್ಸಿ ಗೇಟ್ಗಳನ್ನು ಹೊಂದಿದೆ.
ಎನ್ಸಿಎಂಸಿ ಆರಂಭದ ಬಗ್ಗೆ ಹೇಳಿಕೆ ನೀಡಿರುವ ಮೆಟ್ರೋ ಅಧಿಕಾರಿಗಳು, “ಎನ್ಸಿಎಂಸಿ ಆರಂಭಿಸಲು ನಾವು ಸಿದ್ಧರಾಗಿದ್ದೇವೆ. ಮುಖ್ಯಮಂತ್ರಿಗಳ ಸಮಯಕ್ಕಾಗಿ ನಾವು ಕಾಯುತ್ತಿದ್ದೇವೆ. ಎಲ್ಲಾ ಪರೀಕ್ಷೆಗಳು ಮತ್ತು ಪ್ರಯೋಗಗಳನ್ನು ಪೂರ್ಣಗೊಳಿಸಲಾಗಿದೆ. ಒಂದು ಬಾರಿ ಆರಂಭಗೊಂಡರೆ ಪ್ರಯಾಣಿಕರು ಎಲ್ಲಾ ನಿಲ್ದಾಣಗಳಲ್ಲಿ ಎನ್ಸಿಎಂಸಿ ಬಳಸಲು ಸಾಧ್ಯವಾಗಲಿದೆ. ಆದರೆ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.