ಮಂಗಳೂರು : ನಗರದ ಅತ್ತಾವರದ ಕೆಎಂಸಿ ಬಳಿ ಕಳೆದ ರಾತ್ರಿ ಆಟೋ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ಯುವಕರ ಗುಂಪೋಂದು ದಾಳಿ ನಡೆಸಿದೆ. ದಾಳಿಗೊಳಗಾದವರನ್ನು ಬಂಟ್ವಾಳದ ಪಾಣೆ ಮಂಗಳೂರಿನ ನಂದಾವರ ನಿವಾಸಿ ಗುರುದತ್ತ್ ಎಂದು ಗುರುತಿಸಲಾಗಿದೆ.
ಗುರುದತ್ತ್ ಅವರ ಸೋದರಿಯ ಮಗಳ ಗರ್ಭಿಣಿಯಾಗಿದ್ದು ಅವರು ಅತ್ತಾವರದ ಕೆಎಂಸಿಯಲ್ಲಿ ಭಾನುವಾರ ಹೆಣ್ಣು ಮಗುವಿಗೆ ಜನ್ಮನೀಡಿದ್ದರು. ಅವರನ್ನು ನೋಡಲೆಂದು ಇವರು ಇಲ್ಲಿಗೆ ಆಗಮಿಸಿದ್ದರು. ಅವರು ಆಸ್ಪತ್ರೆಯಿಂದ ಮರಳಿ ಬರುವಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಗುರದತ್ತ್ ಕೆ.ಎಂ.ಸಿ.ಆಸ್ಪತ್ರೆಗೆ ಧಾವಿಸಿದ್ದು ಅವರಿಗೆ ಕೂಡಲೇ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಅವರ ಪ್ರಾಣಕ್ಕೆ ಯಾವ ಅಪಾಯವೂ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನ್ನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ಪರಿಚಯವಿಲ್ಲ ಎಂದು ಪೊಲೀಸರಿಗೆ ಹೇಳಿಕೆಯನ್ನು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಹಿಂದು ಹುಡುಗಿಗೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಯವಕನನ್ನು ಕಂಬಕ್ಕೆ ಕಟ್ಟಿ ಹೊಡೆಯಲಾಗಿತ್ತು. ಇದರ ಪ್ರತೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.