ನವದೆಹಲಿ: ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಬೇಕಾದರೆ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ದ್ವಿಚಕ್ರ ವಾಹನಗಳಲ್ಲಿ 4 ವರ್ಷದೊಳಗಿನ ಮಕ್ಕಳು ಕೂತಿದ್ದರೆ ವೇಗ ಗಂಟೆಗೆ 40 ಕಿಲೋಮೀಟರ್ ಮೀರುವಂತಿಲ್ಲ. ಒಂದು ವೇಳೆ ವೇಗ ಮಿತಿಮೀರಿದರೆ 1000 ರೂಪಾಯಿ ದಂಡ ಮತ್ತು 3 ತಿಂಗಳ ಜೈಲುವಾಸ ಅನುಭವಿಸಬೇಕಾಗುತ್ತದೆ.
ಮಾತ್ರವಲ್ಲದೇ 9 ತಿಂಗಳಿಂದ ನಾಲ್ಕು ವರ್ಷದವರೆಗಿನ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ. ಸಣ್ಣ ಮಕ್ಕಳಿದ್ದರೆ ಮುಂಬದಿ ಸವಾರರು ಬೆಲ್ಟ್ ಧರಿಸುವುದು ಕಡ್ಡಾಯ.
ಕೇಂದ್ರ ಮೋಟಾರು ವಾಹನ ನಿಯಮಗಳು, 1989 ರ ತಿದ್ದುಪಡಿಯ ಮೂಲಕ ಹೊಸ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ನಿತಿನ್ ಗಡ್ಕರಿ ನೇತೃತ್ವದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ಸಾರ್ವಜನಿಕ ಅಭಿಪ್ರಾಯಗಳಿಗಾಗಿ ಕರಡು ನಿಯಮಗಳನ್ನು ಬಿಡುಗಡೆ ಮಾಡಿತು. ಅಂತಿಮಗೊಂಡ ನಂತರ, ನಿಯಮಗಳು ಒಂದು ವರ್ಷದ ನಂತರ ಜಾರಿಗೆ ಬರುತ್ತವೆ. ಸಾರ್ವಜನಿಕ ಸಮಾಲೋಚನೆ ಪ್ರಕ್ರಿಯೆಯು 30 ದಿನಗಳಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಮತ್ತು 2022 ರ ಅಂತ್ಯದ ವೇಳೆಗೆ ಅಂತಿಮ ನಿಯಮಗಳು ಜಾರಿಗೆ ಬರಲಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಿಯಮಾವಳಿಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.