ಜಕಾರ್ತ: ಇಂಡೋನೇಷ್ಯಾದ ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷರಾದ ಸುಕರ್ನೋ ಅವರ ಪುತ್ರಿ ಸುಕ್ಮಾವತಿ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇಂದು ನಡೆದ ಶುದ್ದಿ ವಾದನಿ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಹಿಂದೂ ಧರ್ಮವನ್ನು ಸ್ವೀಕಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಕ್ಮಾವತಿ ಅವರು ಹಿಂದೂ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಹಿಂದೂ ಪದ್ಧತಿಗಳು ಮತ್ತು ಸಂಪ್ರದಾಯಗಳ ಬಗ್ಗೆ ಅವರಿಗೆ ಆಳವಾದ ಜ್ಞಾನವಿದೆ. ಅವರ ಅಜ್ಜಿ ನ್ಯೋಮನ್ ರೈ ಸಿಂಬೆನ್ ಅವರ ಪ್ರಭಾವವು ಕೂಡ ಇವರು ಹಿಂದೂ ಧರ್ಮ ಸ್ವೀಕರಿಸಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಸುಕ್ಮಾವತಿ ಅವರು ಇಂಡೋನೇಷಿಯನ್ ನ್ಯಾಷನಲ್ ಪಾರ್ಟಿ ಸ್ಥಾಪಕರಾಗಿದ್ದಾರೆ. 69 ವರ್ಷದ ಇವರು ಸುಕರ್ನೋ ಅವರ ಮೂರನೇ ಪುತ್ರಿ ಮತ್ತು ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಮೆಗವತಿ ಸುಕರ್ನೋಪುತ್ರಿ ಅವರ ಕಿರಿಯ ಸಹೋದರಿಯಾಗಿದ್ದಾರೆ.
ಇಂಡೋನೇಷಿಯದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದೆ. ಜಗತ್ತಿನ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರ ಕೂಡ ಹೌದು. ಇಲ್ಲಿ ಹಿಂದೂ ಧರ್ಮ ಆರನೇ ಅಧಿಕೃತ ಧರ್ಮವಾಗಿದೆ ಮತ್ತು ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ಬಳಿಕ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಹಿಂದೂ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದೆ.
सुकमावती सुकर्णोपुत्री अपने 30 हजार समर्थकों के साथ इस्लाम से हिन्दू धर्म में वापसी करती हुई।
— हम लोग We The People (@humlogindia) October 26, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.