ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಕೊರೋನಾ ಲಸಿಕಾ ಅಭಿಯಾನಕ್ಕೆ ದೊಡ್ಡ ಜಯ ದೊರೆತಿದ್ದು, ಈ ವರೆಗೆ ದೇಶದಲ್ಲಿ 100 ಕೋಟಿ ಡೋಸ್ಗೂ ಅಧಿಕ ಲಸಿಕೆ ವಿತರಣೆ ಮಾಡುವ ಮೂಲಕ ಯಶಸ್ಸು ಗಳಿಸಿದೆ.
ಈ ವರೆಗೆ ದೇಶದಲ್ಲಿ 100 ಕೊರೋನಾ ಸೋಂಕಿನ ಎರಡನೇ ಅಲೆ ಆರಂಭವಾದ ಬಳಿಕ ಭಾರತದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲು ಆರಂಭಿಸಿದ್ದು, 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ದೇಶದಲ್ಲಿ 100 ಕೋಟಿಗೂ ಅಧಿಕ ಜನರಿಗೆ ಕೊರೋನಾ ಲಸಿಕೆ ನೀಡುವ ಮೂಲಕ ಭಾರತ ಸಾಧನೆ ಮೆರೆದಿದೆ.
130 ಕೋಟಿಗಿಂತ ಅಧಿಕ ಜನರಿರುವ ದೇಶದಲ್ಲಿ 100 ಕೋಟಿಗೂ ಅಧಿಕ ಲಸಿಕೆ ವಿತರಣೆಯ ಮೂಲಕ ಕೇಂದ್ರ ಸರ್ಕಾರ ಮಹತ್ವದ ಸಾಧನೆ ಮೆರೆದಿದೆ.
ಈ ಸಂಬಂಧ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಟ್ವೀಟ್ ಮಾಡಿದ್ದು, ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಭಾರತ ಇತಿಹಾಸ ಬರೆದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Watch history in making!
Join us as we begin our countdown for #VaccineCenturyhttps://t.co/dTk1apFvgA
— Dr Mansukh Mandaviya (@mansukhmandviya) October 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.