ಬೆಳ್ತಂಗಡಿ : ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ ದ. ಕ. ಹಾಗೂ ಉಡುಪಿ ಜಿಲ್ಲೆಗಳ ಕಾರ್ಯವ್ಯಾಪ್ತಿಯಲ್ಲಿ ಕೇಂದ್ರ ಕಚೇರಿ ಸಹಿತ 5 ಶಾಖೆಗಳನ್ನು ಹೊಂದಿದೆ. ಸಂಘವು 2014-15 ನೇ ಸಾಲಿನಲ್ಲಿ 88 ಕೋಟಿ ರೂ. ಅಧಿಕ ವ್ಯವಹಾರ ನಡೆಸಿ 27.24 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದ್ದಾರೆ.
ಅವರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ನಡೆದ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ಸಂಘವು 5789 ಸದಸ್ಯರನ್ನು ಹೊಂದಿದ್ದು 65.37 ಲಕ್ಷ ರೂ. ಪಾಲು ಬಂಡವಾಳ, 12.97 ಕೋಟಿ ರೂ. ಠೇವಣಿ ಹೊಂದಿದೆ. ಇದು ಕಳೆದ ಬಾರಿಯಿಂದ ಶೇ.95 ಅಂಕವಾಗಿದೆ. 11.75 ಕೋಟಿ ರೂ. ಹೊರಬಾಕಿ ಸಾಲವಿದ್ದು 14.28 ಕೋಟಿ ದುಡಿಯುವ ಬಂಡವಾಳವಿದೆ. ಶೇ. 97 ಸಾಲ ಮರುಪಾವತಿಯಾಗಿದೆ ಎಂದರು.
ಬೆಳ್ತಂಗಡಿ ಕೇಂದ್ರ ಕಚೇರಿಯಲ್ಲಿ ಈ-ಸ್ಟಾಂಪಿಂಗ್, ಸೇಫ್ ಲಾಕರ್ ವ್ಯವಸ್ಥೆಯಿದ್ದು ಉಳಿದ ಎಲ್ಲಾ ಶಾಖೆಗಳಲ್ಲಿ ವೆಸ್ಟರ್ನ್ ಯೂನಿಯನ್, ಆರ್ಟಿಜಿಎಸ್, ನೆಫ್ಟ್ ಸೌಲಭ್ಯವಿದೆ. ಸಂಘವು ಅಭಿವೃದ್ಧಿ ಹೊಂದಿದ್ದು ಇನ್ನೂ ಬಲವರ್ಧನೆಗಾಗಿ ಬೆಳುವಾಯಿ ಶಾಖೆಯ ಒಂದನೇ ಮಹಡಿ ಕಟ್ಟಡವನ್ನು ಸಂಘದ ಸ್ವಂತ ಮಾಲಿಕತ್ವದಲ್ಲಿ ಪಡೆಯಲಾಗಿದೆ ಹಾಗೂ ವರ್ಷಕ್ಕೊಂದು ನಿವೇಶನ ಅಥವಾ ಸಂಘದ ಕಚೇರಿಗೆ ಸ್ವಂತ ಕಟ್ಟಡವನ್ನು ಖರೀದಿಸುವ ಉದ್ದೇಶ ಹೊಂದಲಾಗಿದೆ. 2015-16ನೇ ಸಾಲಿಗೆ 120 ಕೋಟಿ ರೂ. ವ್ಯವಹಾರ ನಡೆಸಲು ಗುರಿ ಇರಿಸಲಾಗಿದ್ದು 25 ಕೋಟಿ ಠೇವಣಿ ಸಂಗ್ರಹ ಹಾಗೂ 50ಲಕ್ಷಕ್ಕೂ ಅಕ ಲಾಭ ಗಳಿಸುವ ಉದ್ದೇಶವಿದ್ದು ನೆಲ್ಯಾಡಿಯಲ್ಲಿ 6ನೇ ಶಾಖೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು. ಒಬ್ಬ ವಿಶೇಷ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯನ್ನು ಒಳಗೊಂಡು 18 ಮಂದಿ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿಯವರ ಸಂಪೂರ್ಣ ಸಹಕಾರದಿಂದ ನಿಗದಿತ ಗುರಿಯನ್ನು ಸಾಸುವ ವಿಶ್ವಾಸವಿದೆ ಎಂದರು.
ಸಂಘದ ನಿರ್ದೇಶಕ ಕೆ. ವಸಂತ ಬಂಗೇರ ಮಾತನಾಡಿ, ಸಂಘದ ಅಭಿವೃದ್ಧಿಯ ಬಗ್ಗೆ ಎಲ್ಲರನ್ನು ಅಭಿನಂದಿಸಿ ಮುಂದೆ ಹೆಚ್ಚಿನ ಪ್ರಗತಿಯನ್ನು ಸಾಸಬೇಕು ಎಂದರು. ಉಪಾಧ್ಯಕ್ಷ ದಾಮೋದರ ಸಾಲಿಯನ್, ಸುಜೀತಾ ವಿ. ಬಂಗೇರ, ಹರೀಶ್ ಕುಮಾರ್, ವಿಶೇಷ ಅಧಿಕಾರಿ ಮೋನಪ್ಪ ಪೂಜಾರಿ ಹಾಗೂ ನಿರ್ದೇಶಕರುಗಳು ಉಪಸ್ಥಿತರಿದ್ದರು. ನಿರ್ದೇಶಕ ಧರಣೇಂದ್ರ ಕುಮಾರ್ ಸ್ವಾಗತಿಸಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಶ್ವಥ್ ಕಾರ್ಯಕ್ರಮ ನಿರೂಪಿಸಿ, ಶಿರ್ತಾಡಿ ಶಾಖಾ ವ್ಯವಸ್ಥಾಪಕ ಶಿವಪ್ರಕಾಶ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.