ನವದೆಹಲಿ: ಕಲ್ಲಿದ್ದಲು ಸಚಿವಾಲಯವು 40 ಹೊಸ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 88 ಕಲ್ಲಿದ್ದಲು ಗಣಿಗಳು ಆಫರ್ನಲ್ಲಿದ್ದು, ಇದರಲ್ಲಿ 40 ಹೊಸ ಕಲ್ಲಿದ್ದಲು ಗಣಿಗಳಾಗಿವೆ ಮತ್ತು ಇದನ್ನು ಹರಾಜು ಹಾಕಲಾಗುತ್ತಿದೆ. ಉಳಿದ 48 ಕಲ್ಲಿದ್ದಲು ಗಣಿಗಳು ಹಿಂದಿನ ಸುತ್ತಿನ ಹರಾಜಿನ ರೋಲ್ಓವರ್ ಗಣಿಗಳಾಗಿವೆ ಸಚಿವಾಲಯ ಹೇಳಿದೆ.
ಸುಮಾರು 55 ಶತಕೋಟಿ ಟನ್ಗಳಷ್ಟು ಕಲ್ಲಿದ್ದಲಿನ ಒಟ್ಟು ಭೌಗೋಳಿಕ ಸಂಪನ್ಮೂಲಗಳು ಲಭ್ಯವಿವೆ, ಅದರಲ್ಲಿ 57 ಸಂಪೂರ್ಣ ಪರಿಶೋಧಿತ ಗಣಿಗಳು ಮತ್ತು 31 ಭಾಗಶಃ ಪರಿಶೋಧಿತ ಗಣಿಗಳಾಗಿವೆ. ನಾಲ್ಕು ಕೋಕಿಂಗ್ ಕಲ್ಲಿದ್ದಲು ಗಣಿಗಳಿವೆ ಎಂದು ಸಚಿವಾಲಯ ಹೇಳಿದೆ.
ಜಾರ್ಖಂಡ್, ಛತ್ತೀಸ್ಗಢ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂಗಳು ಈ ಕಲ್ಲಿದ್ದಲು ಗಣಿಗಳನ್ನು ಹೊಂದಿರುವ 10 ರಾಜ್ಯಗಳಾಗಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರವು ಕಲ್ಲಿದ್ದಲು ವಲಯವನ್ನು ಸುಧಾರಿಸಲು ಮತ್ತು ರಾಷ್ಟ್ರದ ಆರ್ಥಿಕತೆಯ ಮೌಲ್ಯಗಳನ್ನು ಅನ್ಲಾಕ್ ಮಾಡಲು ನಿರಂತರ ಪ್ರಯತ್ನವನ್ನು ನಡೆಸುತ್ತಿದೆ ಎಂದು ಒತ್ತಿ ಹೇಳಿದರು.
ಕೋವಿಡ್ ಪೂರ್ವದ ಸಮಯಕ್ಕೆ ಹೋಲಿಸಿದರೆ ವಿದ್ಯುತ್ ಬೇಡಿಕೆ ಈಗ ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತವು ಪ್ರಸ್ತುತ ಅತ್ಯಂತ ಕಡಿಮೆ ತಲಾ ವಿದ್ಯುತ್ ಬಳಕೆ ಮಾಡುವ ರಾಷ್ಟ್ರವಾಗಿದೆ ಎಂದು ಸಚಿವರು ಒತ್ತಿ ಹೇಳಿದರು. 2040 ರ ವೇಳೆಗೆ ದೇಶದ ವಿದ್ಯುತ್ ಬೇಡಿಕೆಯು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.