ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಭಾರತದ ಹೋರಾಟ ನಿರಂತರವಾಗಿದೆ. ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ನಡೆಸುತ್ತಿರುವ ಭಾರತ ಇದೀಗ ಮಹತ್ವದ ಮೈಲುಗಲ್ಲು ಸಾಧಿಸಿದೆ.
ಭಾರತದ ಕೋವಿಡ್ ಲಸಿಕೆ ವ್ಯಾಪ್ತಿ 95 ಕೋಟಿ ಗಡಿ ದಾಟಿದೆ. ಭಾರತ ಇದುವರೆಗೆ 95 ಕೋಟಿ 14 ಲಕ್ಷ ಡೋಸ್ ಲಸಿಕೆಯನ್ನು ತನ್ನ ನಾಗರಿಕರಿಗೆ ನೀಡಿದೆ. ನಿನ್ನೆ 46 ಲಕ್ಷ 46 ಸಾವಿರ ಡೋಸ್ಗಳನ್ನು ನೀಡಲಾಗಿದೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತವು 100 ಕೋಟಿ ಲಸಿಕೆ ಡೋಸ್ಗಳನ್ನು ನೀಡುವತ್ತ ವೇಗವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಯಶಸ್ವಿ ಲಸಿಕಾ ಅಭಿಯಾನವು ಭರದಿಂದ ಸಾಗುತ್ತಿದೆ ಮತ್ತು ಜನರು ಬೇಗನೆ ಲಸಿಕೆ ಹಾಕಿಸಿಕೊಳ್ಳುವಂತೆ ಮತ್ತು ಸ್ನೇಹಿತರು ಮತ್ತು ಕುಟುಂಬದವರಿಗೆ ಲಸಿಕೆ ಹಾಕಿಸಿಕೊಳ್ಳಲು ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದ್ದಾರೆ.
World's largest successful vaccination drive in full swing! 💉
✅ India completes administration of 95 crore #COVID19 vaccine doses.
💯 Marching rapidly towards administering 100 crore vaccine doses.
Get vaccinated quickly and encourage your friends & family to do the same! pic.twitter.com/yp2MLLQMuo
— Dr Mansukh Mandaviya (@mansukhmandviya) October 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.