ಮಾಜಿ ಕ್ರೀಡಾಪಟು ಎಲ್ವಿಸ್ ಜೋಸೆಫ್ ಗಾಯದ ಸಮಸ್ಯೆ ಎದುರಿಸಿದ್ದರಿಂದ ತಮ್ಮ ಕ್ರೀಡಾ ವೃತ್ತಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಕಾರ್ಪೋರೇಟ್ ವೃತ್ತಿ ಆಯ್ದುಕೊಂಡರೂ ಅವರ ಮನಸ್ಸು ಕ್ರೀಡೆಯಲ್ಲೇ ಇದ್ದಿತ್ತು. ಅಮೇರಿಕದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದ ಎಲ್ವಿಸ್, ಕ್ರೀಡಾ ನಿರ್ವಹಣಾ ಅಧ್ಯಯನ ಮಾಡಿ ಪದವಿ ಪಡೆದರು.
ಅವರು ಎಲ್ಲಾ ಮಕ್ಕಳ ಬಾಲ್ಯ ಜೀವದ ಆರಂಭದಲ್ಲಿ ಕ್ರೀಡಾ ಮತ್ತು ದೈಹಿಕ ಚಟುವಟಿಕೆಗಳ ಅನುಭವ ಧನಾತ್ಮಕ ಹಾಗೂ ಲಾಭದಾಯಕವಾಗಿರುತ್ತದೆ ಎಂದು ಖಚಿತಪಡಿಸುವ ಬಯಕೆ ಹೊಂದಿದರು. 2009ರಲ್ಲಿ ತಮ್ಮ ವೃತ್ತಿಯನ್ನು ತೊರೆದ ಎಲ್ವಿಸ್, ಸಂಸ್ಥೆಯೊಂದನ್ನು ಆರಂಭಿಸಿ ಎಲ್ಲಾ ಶಾಲಾ ಮಕ್ಕಳು, ಪೋಷಕರು, ಖಾಸಗಿ ಕ್ಲಬ್ಗಳು, ತರಬೇತುದಾರನ್ನು ಒಗ್ಗೂಡಿಸಿ ಕ್ರೀಡೆಯನ್ನು ವೃತ್ತೀಯವಾಗಿಸಿದರು. ಶಾಲೆಗಳಲ್ಲಿ ಕ್ರೀಡೆಗಳು ನಡೆದರೂ, ನಡೆಯದಿದ್ದರೂ, ಕ್ರೀಡಾಂಗಣ ಇಲ್ಲದೇ ಇದ್ದರೂ ಪ್ರತ್ಯೇಕ ಹಣ ಪಡೆಯುತ್ತಾರೆ. ಕೇವಲ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ನಾವು ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಸಂಸ್ಥೆಯನ್ನು ಆರಂಭಿಸಿದೆವು ಎನ್ನುತ್ತಾರೆ ಎಲ್ವಿನ್.
ಬಾಬು ಸೇನಪ್ಪ ಹಾಗೂ ಮಾನಿಕ್ ಪ್ರಭು ಎಂಬ 14 ವರ್ಷ ಪ್ರಾಯದ ಇಬ್ಬರು ಎಚ್ಐವಿ ಪೀಡಿತ ಮಕ್ಕಳಿಗೆ ಈ ವರ್ಷ ಜೂನ್ ತಿಂಗಳಿನಲ್ಲಿ ನೆದರ್ಲೆಂಡ್ನಲ್ಲಿ ನಡೆದ ಮಕ್ಕಳ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ದೊರಕಿತ್ತು. ಇಂತಹ ಘಟನೆ ಈವರೆಗೆ ಜಗತ್ತಿನಲ್ಲಿ ಎಂದೂ ನಡೆದಿಲ್ಲ. ಈ ಮಕ್ಕಳ ಸಾಧನೆ ಬಗ್ಗೆ ಒಲಿಂಪಿಕ್ಸ್ ಅಮಿಟಿ ಸದಸ್ಯರಿಗೂ ಅಚ್ಚರಿ ಮೂಡಿಸಿತ್ತು.
ಬೆಂಗಳೂರಿನ 250 ಶಾಲೆಗಳ ಜೊತೆ ಕಾರ್ಯನಿರ್ವಸುತ್ತಿರುವ ಎಲ್ವಿಸ್ ಅವರ ಬಿಎಸ್ಎಸ್ಎಫ್ ಸಂಸ್ಥೆ ಮಕ್ಕಳ ಕ್ರೀಡಾಸ್ಫೂರ್ತಿಯನ್ನು ಹೆಚ್ಚಿಸಲು ಇನ್ನೂ ಹಲವು ಪ್ರಯೋಗಗಳನ್ನು ಮಾಡುವ ಯೋಜನೆಯನ್ನು ಹೊಂದಿದೆ. ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಬಾಸ್ಕೆಟ್ಬಾಲ್, ಟೆನಿಸ್, ಹಾಕಿ, ಗಾಲ್ಫ್, ಈಜು, ಮಕ್ಕಳ ಮ್ಯಾರಥಾನ್, ಜುಡೋ ಮೊದಲಾದ ಕ್ರೀಡೆಗಳಲ್ಲಿ ಸ್ಪರ್ಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ.
ಈ ಸಂಸ್ಥೆ ಅಥ್ಲೀಟ್ಗಳಿಗೆ ಉತ್ತಮ ಮಾರ್ಗದರ್ಶಕವಾಗಿದೆ. 12೨ರಿಂದ 15 ವರ್ಷ ಪ್ರಾಯದ ಮಕ್ಕಳಿಗೆ ಚಿಲ್ಡ್ರನ್ಸ್ ಒಲಿಂಪಿಕ್ಸ್ ಪ್ರತಿ ವರ್ಷ ನಡೆಯುತ್ತದೆ. ಇದರ ಜೊತೆಗೆ ಎರಡು ವರ್ಷಗಳಿಗೊಮ್ಮೆ ಯೂಥ್ ಒಲಿಂಪಿಕ್ಸ್ ಹಾಗೂ ನಾಲ್ಕು ವರ್ಷಗಳಿಗೊಮ್ಮೆ ಇಲೈಟ್ ಒಲಿಂಪಿಕ್ಸ್ ಕ್ರೀಡಾಕೂಟಗಳು ನಡೆಯುತ್ತವೆ. 2009ರಲ್ಲಿ ಕರ್ನಾಟಕ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಅವರ ನೆರವಿನಿಂದ ಎಲ್ವಿನ್ ಅವರು ಬೆಂಗಳೂರಿನ ಹಲವು ಶಾಲಾ ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಅಂತಾರಾಷ್ಟ್ರೀಯ ಮಕ್ಕಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಎಚ್ಐವಿ, ಏಡ್ಸ್ ಪೀಡಿತ ಮಕ್ಕಳನ್ನು ಗುರುತಿಸಿ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುತ್ತಿದೆ. ಇಂತಹ ಮಕ್ಕಳಿಗಾಗಿಯೇ ಸಂಸ್ಥೆಯು ಪ್ರತಿ ವರ್ಷ ಡಿ.1ರಂದು ಕ್ರೀಡಾಕೂಟವನ್ನು ಆಯೋಜಿಸುತ್ತದೆ. ಅಂತಹವರಲ್ಲಿ ಬಾಬು ಸೇನಪ್ಪ ಹಾಗೂ ಮಾನಿಕ್ ಪ್ರಭು ಎಂಬುವರು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರತಿಭಾವಂತ ಕ್ರೀಡಾಪಟುಗಳಾಗಿ ಗುರುತಿಸಿಕೊಂಡಿದ್ದಾರೆ. ಈ ಕ್ರೀಡಾ ಯೋಜನೆಯು ಸ್ಲಮ್ಗಳಲ್ಲಿನ ಮಕ್ಕಳಿಗೆ ತರಬೇತಿ ನೀಡುವರೆಗೂ ತಲುಪಿದೆ.
ಎಲ್ವಿಸ್ ಅವರ ಈ ಯೋಜನೆ ಕೇವಲ ಇಲ್ಲಿಗೆ ಉಳಿಯದೇ ಬೆಂಗಳೂರಿನಲ್ಲಿರುವ ಬಾಲಾಪರಾಧಿಗಳಿಗೆ, ವಿಕಲಚೇತನ ಮಕ್ಕಳಿಗೆ, ಬುಡಕಟ್ಟು ಮಕ್ಕಳಿಗೂ ತರಬೇತಿ ನೀಡುತ್ತಿದೆ.
ಎಲ್ವಿಸ್ ಅವರು ತಮ್ಮ ಸಂಪೂರ್ಣ ಉಳಿತಾಯವನ್ನು ವ್ಯಯಿಸಿ, ನಾಲ್ಕು ಮಂದಿಯ ಒಂದು ತಂಡ ರಚಿಸುವ ಮೂಲಕ ಆರಂಭಿಸಿದ್ದ ಈ ಸಂಸ್ಥೆ ಈಗ ಹಲವಾರು ಕಾರ್ಯಕರ್ತರನ್ನು ಹೊಂದಿದೆ. ಜೊತೆಗೆ ಕೆಲವು ಸ್ಪಾನ್ಸರ್ಗಳನ್ನೂ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.