ಕೋಲ್ಕತ್ತಾ: ಐಪಿಎಲ್ ೮ನೇ ಸೀಸನ್’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದಕ್ಕಾಗಿ ಕೋಲ್ಕತ್ತಾದ ಸಾಲ್ಟ್’ಲೇಕ್ ಕ್ರೀಡಾಂಗಣದ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನಡೆಯಲಿದೆ.
ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನಟ ನಟಿಯರ ದಂಡೇ ಆಗಮಿಸಲಿದೆ. ಹೃತಿಕ್ ರೋಷನ್ ಹಾಗೂ ಶಾಹಿದ್ ಕಪೂರ್ ಸ್ಟೇಜ್ ಶೋ ನೀಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯ ಹೊಣೆ ನಟ ಸೈಫ್ ಅಲಿ ಖಾನ್ ಹೊತ್ತಿದ್ದಾರೆ. ಇನ್ನು ಫರ್ಹಾನ್ ಅಖ್ತರ್, ಸಂಗೀತ ನಿರ್ದೇಶಕ ಪ್ರೀತಮ್ ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಐಪಿಎಲ್ ಸೀಸನ್ ೮ರ ಎಲ್ಲಾ ತಂಡಗಳ ನಾಯಕರು ಸಮಾರಂಭದಲ್ಲಿ ಹಾಜರಿರಲಿದ್ದಾರೆ. ವಿಶೇಷವಾಗಿ 2008ರಿಂದ ಟೂರ್ನಿ ನಡೆದು ಬಂದ ಹಾದಿಯ ಕಿರುಚಿತ್ರವನ್ನು ಇಂದು ಪ್ರದರ್ಶಿಸಲಾಗತ್ತದೆ. ಕೊನೆಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಟ್ರೋಫಿಯನ್ನು ಮತ್ತೆ ಸ್ಪರ್ಧಾ ಕಣಕ್ಕಿಡಲಿದ್ದಾರೆ.
ಏಪ್ರಿಲ್ ೮ರಿಂದ ಪಂದ್ಯಗಳು ಶುರುವಾಗಲಿದ್ದು, ವಿಶ್ವಕಪ್ ಮುಗಿಸಿದ ಕೆಲವೇ ದಿನಗಳಲ್ಲಿ ಮತ್ತೆ ಚುಟುಕು ಕ್ರಿಕೆಟ್ ಮೂಲಕ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಅಲೆಯಲ್ಲಿ ಮತ್ತೆ ಮುಳುಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.