ನವದೆಹಲಿ: ಗಾಂಧಿ ಜಯಂತಿಯ ಸುಸಂದರ್ಭದಲ್ಲಿ, ಲಡಾಖ್ ರಾಜಧಾನಿ ಲೇಹ್ನಲ್ಲಿ ಬೃಹತ್ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸಲಾಯಿತು. ಇದನ್ನು ಖಾದಿಯಿಂದ ತಯಾರಿಸಲಾದ ವಿಶ್ವದ ಅತಿ ದೊಡ್ಡ ರಾಷ್ಟ್ರ ಧ್ವಜವೆಂದು ಪರಿಗಣಿಸಲಾಗಿದೆ.
ಇದನ್ನು ಸಂಪೂರ್ಣವಾಗಿ ಖಾದಿಯಿಂದ ತಯಾರಿಸಲಾಗಿದ್ದು, ಧ್ವಜದ ಗಾತ್ರ 225 × 150 ಅಡಿ ಮತ್ತು ಇದು ಒಂದು ಟನ್ ತೂಗುತ್ತದೆ. ಇದನ್ನು ತಯಾರಿಸಲು ಸುಮಾರು 1.5 ತಿಂಗಳುಗಳು ಬೇಕಾಯಿತು ಎಂದು ಧ್ವಜ ತಯಾರಿಸಿದ ಮುಂಬೈನ ಖಾದಿ ಡೈಯರ್ಸ್ & ಪ್ರಿಂಟರ್ಸ್ನ ಡಿಎನ್ ಭಟ್ ಮಾಹಿತಿ ನೀಡಿದ್ದಾರೆ.
ಧ್ವಜವನ್ನು ರಚಿಸಲು ನಾವು ಹೆಚ್ಚುವರಿ ಕಲಾವಿದರನ್ನು ನೇಮಿಸಿಕೊಳ್ಳಬೇಕಾಗಿತ್ತು. ಇದು ಅತ್ಯಂತ ಭಾರವಾಗಿದೆ. ಸೈನಿಕರು ಬಂದು ಇದನ್ನು ಸಾಗಿಸಿದರು “ಎಂದು ಭಟ್ ತಿಳಿಸಿದ್ದಾರೆ.
ಧ್ವಜವನ್ನು ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್ ಕೆ ಮಾಥುರ್ ಉದ್ಘಾಟಿಸಿದರು. ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಗಾಂಧಿ ಜಯಂತಿಯನ್ನು ಆಚರಿಸಲು ಖಾದಿ ಉತ್ಪನ್ನಗಳನ್ನು ಖರೀದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ್ದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದಾಗಿದೆ . “ನಾವು ಖಾದಿ ಉತ್ಪನ್ನಗಳನ್ನು ಖರೀದಿಸೋಣ ಮತ್ತು ಬಾಪುವಿನ ಜಯಂತಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸೋಣ” ಎಂದು ಅವರು ಇತ್ತೀಚಿನ ‘ಮನ್ ಕಿ ಬಾತ್’ ಸಂಚಿಕೆಯಲ್ಲಿ ಹೇಳಿದ್ದರು.
#WATCH LG Ladakh RK Mathur today unveiled the National flag created by Khadi & Village Industries Commission at an event organized by the Indian Army's Fire and Fury Corps, Ladakh pic.twitter.com/7wMmS4ua8y
— ANI (@ANI) October 2, 2021
#WATCH | 150 troops of Indian Army’s 57 Engineer regiment carried the world’s largest Indian National flag made of khadi to the top of a hill at over 2000 feet above the ground level in Leh, Ladakh. It took two hours for troops to reach the top. pic.twitter.com/ZvlKEotvXy
— ANI (@ANI) October 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.