ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆಮದು ಕೇಂದ್ರಿತ ಭಾರತದಿಂದ ಮೇಕ್ ಇನ್ ಇಂಡಿಯಾಗೆ ಬದಲಾಗಲು ಒಂದು ವಿಸ್ತಾರವಾದ ಮೂಲಸೌಕರ್ಯ ಜಾಲವನ್ನು ನಿರ್ಮಿಸಲು ಉಪಕ್ರಮಗಳನ್ನು ಮತ್ತು ಗುರಿಗಳನ್ನು ಹಾಕಿಕೊಳ್ಳುತ್ತಿದೆ.
ಭಾರತದ ಆರೋಗ್ಯ ರಕ್ಷಣೆ ಕ್ಷೇತ್ರವು ವರ್ಷಗಳಿಂದ ಅದ್ಭುತವಾದ ಬೆಳವಣಿಗೆಯನ್ನು ಕಂಡಿದೆ, ಇದು ದೇಶದಲ್ಲಿ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಇದೀಗ ಭಾರತದ ಬಯೋ-ಎಕಾನಮಿಯನ್ನು ಮತ್ತಷ್ಟು ವೃದ್ಧಿಸಲು, ‘ಜನ್ ಕೇರ್’ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಟೆಲಿಮೆಡಿಸಿನ್, ಡಿಜಿಟಲ್ ಹೆಲ್ತ್, ಎಮ್ಹೆಲ್ತ್ ಬಿಗ್ ಡೇಟಾ, ಎಐ, ಬ್ಲಾಕ್ಚೈನ್ ಮತ್ತು ಇತರ 75 ಸ್ಟಾರ್ಟ್-ಅಪ್ ಆವಿಷ್ಕಾರಗಳನ್ನು ಗುರುತಿಸುವ ಗುರಿಯನ್ನು ಹೊಂದಿರುವ “ಜನ್ ಕೇರ್” ಎಂಬ ಕಾರ್ಯಕ್ರಮಕ್ಕೆ ನಿನ್ನೆ ಚಾಲನೆ ನೀಡಿದ್ದಾರೆ.
ಅದರೊಂದಿಗೆ ಅಮೃತ್ ಗ್ರ್ಯಾಂಡ್ ಚಾಲೆಂಜ್ ಕಾರ್ಯಕ್ರಮವು ಯುವ ಸ್ಟಾರ್ಟ್ಅಪ್ಗಳು ಮತ್ತು ಉದ್ಯಮಿಗಳಿಗೆ ಭಾರತದ ಆರೋಗ್ಯ ಸವಾಲುಗಳನ್ನು ಪೂರೈಸಲು ನವೀನ ಆಲೋಚನೆಗಳು ಮತ್ತು ಪರಿಹಾರಗಳೊಂದಿಗೆ ಹೊರಬರಲು ಒಂದು ಸ್ಪಷ್ಟ ಕರೆಯಾಗಿದೆ. ಈ ಪ್ಲಾಟ್ಫಾರ್ಮ್ ಅಡಿಯಲ್ಲಿ 75 ಅತ್ಯುತ್ತಮ ಎಂದು ಆಯ್ಕೆಯಾದ ಸ್ಟಾರ್ಟ್ಅಪ್ಗಳು ಮುಂಬರುವ 25 ವರ್ಷಗಳಲ್ಲಿ ದೇಶದ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.