ನವದೆಹಲಿ: ಕೊರೋನಾ ವಿರುದ್ಧ ಭಾರತದ ಹೋರಾಟ ನಿರಂತರವಾಗಿ ಮುಂದುವರೆದಿದೆ. ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಮುನ್ನಡೆಸುತ್ತಿರುವ ಭಾರತ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿದೆ. ಸೋಮವಾರ ಭಾರತವು ಒಂದು ಕೋಟಿ ಲಸಿಕೆ ಡೋಸ್ಗಳನ್ನು ನೀಡಿದೆ.
ಲಸಿಕೆ ಅಭಿಯಾನ ಆರಂಭವಾದ ಬಳಿಕ ಭಾರತ ಐದನೇ ಬಾರಿಗೆ ಒಂದು ದಿನದಲ್ಲಿ ಒಂದು ಕೋಟಿ ಲಸಿಕೆಯನ್ನು ನೀಡುತ್ತಿದೆ. ಈ ಮೈಲಿಗಲ್ಲಿನ ಸಾಧನೆಗಾಗಿ ಕೇಂದ್ರ ಆರೋಗ್ಯ ಸಚಿವ ಮಾನ್ಸೂಕ್ ಮಾಂಡವಿಯಾ ಅವರು ದೇಶದ ನಾಗರಿಕರನ್ನು ಅಭಿನಂದಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, “ದೇಶಕ್ಕೆ ಅಭಿನಂದನೆಗಳು, ನಾವು ಮತ್ತೊಂದು ಬಾರಿ ಒಂದು ಕೋಟಿ ಕೋವಿಡ್ ಲಸಿಕೆಯನ್ನು ನೀಡಿದ್ದೇವೆ. ಪ್ರಧಾನಿ ಮೋದಿ ನೇತೃತ್ವದಡಿ ಭಾರತ ಕೊರೋನಾಗೆ ಪಂಚ್ ನೀಡುತ್ತಿದೆ. 5ನೇ ಬಾರಿಗೆ ದಾಖಲೆಯ 1+ ಕೋಟಿ ಲಸಿಕೆ ನೀಡುವ ಮೂಲಕ ಸಾಧನೆ ಮಾಡಲಾಗಿದೆ” ಎಂದಿದ್ದಾರೆ.
Congratulations to the nation, as we administer another 1 crore #COVID19 vaccine doses 👏
Under PM @NarendraModi ji, India delivers a punch to Corona – Record of 1+ crore vaccines achieved for the 5th time.#SabkoVaccineMuftVaccine pic.twitter.com/fQfVWoDAbR
— Dr Mansukh Mandaviya (@mansukhmandviya) September 27, 2021
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿನ್ನೆ ಟ್ವೀಟ್ ಮಾಡಿ, “ಅಭಿನಂದನೆಗಳು ಭಾರತ. ಮತ್ತೊಂದು ಬಾರಿ ನಾವು ಸಾಧಿಸಿದ್ದೇವೆ. ಇಂದು 1 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.