ನವದೆಹಲಿ: ಕೇಂದ್ರ ಶಿಕ್ಷಣ ಸಚಿವರಾಧ ಧರ್ಮೇಂದ್ರ ಪ್ರಧಾನ್ ಮತ್ತು ಭಾರತದಲ್ಲಿನ ಫಿನ್ನಿಷ್ ರಾಯಭಾರಿ ರಿತ್ವ ಕೌಕ್ಕು-ರೊಂಡೆ ಅವರು ಇಂದು ದ್ವಿಪಕ್ಷೀಯ ಸಹಕಾರ ವಿಶೇಷವಾಗಿ ಡಿಜಿಟಲ್ ಕಲಿಕೆ, ನಾವೀನ್ಯತೆ ಮತ್ತು ಇತರ ಆದ್ಯತೆಯ ಪ್ರದೇಶಗಳ ಕುರಿತು ಸಭೆ ನಡೆಸಿದರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ರಿತ್ವ ಕೂಕ್ಕು-ರೊಂಡೆ ಅವರನ್ನು ಭೇಟಿ ಮಾಡಿದ್ದು ಸಂತೋಷ ತಂದಿದೆ. ನಾವು ಬಹುಮುಖಿ ದ್ವಿಪಕ್ಷೀಯ ಸಹಕಾರ ವಿಶೇಷವಾಗಿ ಡಿಜಿಟಲ್ ಕಲಿಕೆ, ನಾವೀನ್ಯತೆ ಮತ್ತು ಶಿಕ್ಷಣ ಕ್ಷೇತ್ರದ ಇತರ ಆದ್ಯತೆಯ ಕ್ಷೇತ್ರಗಳ ಬಗ್ಗೆ ಫಲಪ್ರದ ಮಾತುಕತೆ ನಡೆಸಿದ್ದೇವೆ” ಎಂದಿದ್ದಾರೆ.
Glad to meet HE Ritva Koukku-Ronde, Finnish Amb. to India and EU Gender Champion. We had productive discussions on intensifying our multi-faceted bilateral cooperation, especially in digital learning, innovation & other priority areas in the education sector. @AmbKoukkuRonde pic.twitter.com/y3haAXm7s0
— Dharmendra Pradhan (@dpradhanbjp) September 20, 2021
ಅದರ ಹೊರತಾಗಿ, ನಾಯಕರು ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಔದ್ಯೋಗಿಕ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಕೆ -12 ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟುಗಳಲ್ಲಿ ಸಾಮರ್ಥ್ಯವನ್ನು ಸೃಷ್ಟಿಸಲು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡರು.
“ನಾವು ಅತ್ಯುತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ವೃತ್ತಿಪರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಕೆ -12, ಪಠ್ಯಕ್ರಮ ಮತ್ತು ಶಿಕ್ಷಣ ಚೌಕಟ್ಟುಗಳು, ಶಿಕ್ಷಕರ ತರಬೇತಿ ಮತ್ತು ಐಸಿಟಿ ಕ್ಷೇತ್ರಗಳಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.