ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವೀಕರಿಸಿದ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಇಂದಿನಿಂದ ಆರಂಭವಾಗಿದೆ. ಸಂಸ್ಕೃತಿ ಸಚಿವಾಲಯವು ಇ-ಹರಾಜನ್ನು ಆಯೋಜಿಸುತ್ತಿದೆ.
ಸ್ಮರಣಿಕೆಗಳಲ್ಲಿ ಕ್ರೀಡಾ ಪೇಟ ಮತ್ತು ಪದಕ ವಿಜೇತ ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್ ಕ್ರೀಡಾಳುಗಳ ಉಪಕರಣಗಳು, ಅಯೋಧ್ಯೆ ರಾಮಮಂದಿರ ಪ್ರತಿರೂಪ, ಚಾರ್ಧಮ್, ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ಪ್ರತಿರೂಪಗಳು, ಮಾಡೆಲ್ಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರಗಳು ಸೇರಿವೆ.
ವ್ಯಕ್ತಿಗಳು ಅಥವಾ ಸಂಸ್ಥೆಗಳು ಇಂದಿನಿಂದ ಅಕ್ಟೋಬರ್ 7 ರವರೆಗೆ pmmementos.gov.in ವೆಬ್ಸೈಟ್ ಮೂಲಕ ಇ-ಹರಾಜಿನಲ್ಲಿ ಭಾಗವಹಿಸಬಹುದು. ಇ-ಹರಾಜಿನಿಂದ ಬರುವ ಆದಾಯವು ಗಂಗಾ ಸಂರಕ್ಷಣೆ ಮತ್ತು ಪುನಶ್ಚೇತನದ ಗುರಿಯನ್ನು ಹೊಂದಿರುವ ನಮಾಮಿ ಗಂಗೆ ಮಿಷನ್ಗೆ ಬಳಕೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.