ಮೂಡುಬಿದಿರೆ : ವಿಶ್ವ ಹಿಂದೂ ಪರಿಷತ್ -ಭಜರಂಗದಳ ಮೂಡುಬಿದರೆ ಪ್ರಖಂಡದ ಆಶ್ರಯದಲ್ಲಿ ಸೋಮವಾರ ಗೋ-ಜಾಗೃತಿ ಸಮಾವೇಶ ಮತ್ತು ಬೃಹತ್ ಪ್ರತಿಭಟನಾ ಸಭೆ ನಡೆಯಿತು.
ಈ ವೇಳೆನಗರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋ ಸಾಗಾಣಿಕೆ, ಗೋಹತ್ಯೆ ಮತ್ತು ಕಸಾಯಿಖಾನೆಗಳ ವಿರುದ್ಧ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಯಿತು. ನಗರದ ರಾಜೀವ್ ಗಾಂಧೀ ವಾಣಿಜ್ಯ ಸಂಕೀರ್ಣದ ಬಳಿ ಮೆರವಣಿಗೆ ಸಮಾಪನಗೊಂಡಿತು.ಆರ್.ಎಸ್.ಎಸ್.ನ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಂತ ಭಜರಂಗದಳ ಸಂಚಾಲಕ ಶರಣ್ ಪಂಪ್ವೆಲ್, ಗೋ ಸಂರಕ್ಷಣಾ ಪ್ರಮುಖ್ ದಿನೇಶ್ ಪೈ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಮತ್ತು ಪ್ರಖಂಡ ಪ್ರಮುಖರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.