ನವದೆಹಲಿ: ತಾಲೀಬಾನ್ ಹಿಡಿತದಲ್ಲಿರುವ ಅಫ್ಘಾನಿಸ್ಥಾನದಿಂದ ಭಾರತಕೀ ಬರುವವರಿಗೆ ಇ – ವಿಸಾ ಕಡ್ಡಾಯ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಇ ವಿಸಾ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡು ಕಡ್ಡಾಯವಾಗಿ ವಿಸಾ ಪಡೆಯುವಂತೆ ಸಚಿವಾಲಯವು ಸೂಚಿಸಿದೆ. https://indianvisaonline.gov.in/ ವೆಬ್ಸೈಟ್ ಮೂಲಕ ಇ ವಿಸಾ ಪಡೆಯಲು ಅರ್ಜಿ ಸಲ್ಲಿಸುವಂತೆ ತಿಳಿಸಿದೆ.
ಅಫ್ಘಾನಿಸ್ಥಾನವನ್ನು ತಾಲೀಬಾನ್ ಉಗ್ರರು ವಶಕ್ಕೆ ತೆಗೆದುಕೊಂಡ ಬಳಿಕ ಅಲ್ಲಿನ ಜನರು ಭಾರತ, ಅಮೆರಿಕ ಮೊದಲಾದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತಕ್ಕೆ ಆಗಮಿಸುವವರಿಗೆ ಇ – ವಿಸಾ ಕಡ್ಡಾಯ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈ ಮೊದಲು ಪಡೆದಿರುವ ಯಾವುದೇ ವಿಸಾ ಗಳಿಗೆ ಮಾನ್ಯತೆ ಇಲ್ಲ ಎಂಬುದನ್ನು ಸಹ ಸಚಿವಾಲಯವು ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.