ನವದೆಹಲಿ: ಉತ್ಪಾದಕರು ತಮ್ಮ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಲು ಆದ್ಯತೆಯ ದೇಶವಾಗಿ ಜಗತ್ತಿನಲ್ಲೇ ಭಾರತ ಎರಡನೇ ಸ್ಥಾನದಲ್ಲಿದೆ.
ಜಾಗತಿಕ ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಕಶ್ಮನ್ ಆಂಡ್ ವೇಕ್ಫೀಲ್ಡ್ ಈ ವರ್ಷದ ಜಾಗತಿಕ ಉತ್ಪಾದನಾ ಸವಾಲುಗಳ ಸೂಚ್ಯಂಕಗಳನ್ನು ಆಧರಿಸಿ ಈ ವರದಿಯನ್ನು ನೀಡಿದೆ.
ಉತ್ಪಾದಕರ ಖರ್ಚು, ಸ್ಪರ್ಧಾತ್ಮಕತೆ, ಗುಣಮಟ್ಟಗಳನ್ನು ಪರಿಶೀಲಿಸಿ ಈ ಮಾಹಿತಿಯನ್ನು ನೀಡಿದ್ದು, ಇದರಲ್ಲಿ ಭಾರತವು ಉತ್ಪಾದಕರಿಗೆ ಹೆಚ್ಚು ಪ್ರಿಯ ಎಂದು ತಿಳಿಸಿದೆ. ಮೊದಲನೇ ಸ್ಥಾನದಲ್ಲಿ ಚೀನಾ ಇದ್ದು, ಭಾರತ ಅಮೆರಿಕವನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಅಮೆರಿಕ ಎರಡನೇ ಸ್ಥಾನದಲ್ಲಿತ್ತು.
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಭಾರತವು ಉದ್ಯಮಗಳ, ಉದ್ಯಮಿಗಳ ಪ್ರಿಯ ರಾಷ್ಟ್ರವಾಗಿ ಎರಡನೇ ಸ್ಥಾನವನ್ನು ಪಡೆದಿದೆ. ಮೂರನೇ ಸ್ಥಾನದಲ್ಲಿ ಅಮೆರಿಕ, ಅನಂತರ ಸ್ಥಾನಗಳನ್ನು ಕೆನಡಾ, ಚೆಕ್ ಗಣರಾಜ್ಯ, ಇಂಡೋನೇಷ್ಯಾ, ಲಿಥುವೇನಿಯ, ಥಾಯ್ಲೆಂಡ್, ಮಲೇಷ್ಯಾ, ಪೋಲೆಂಡ್ಗಳು ಗಳಿಸಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.