ಮಾಸ್ಕೋ: 2021 ರ.ಅಂತ್ಯದ ವೇಳೆಗೆ ಭಾರತಕ್ಕೆ ಬಹುನಿರೀಕ್ಷಿತ ಎಸ್ – 400 ಕ್ಷಿಪಣಿಗಳನ್ನು ಸರಬರಾಜು ಮಾಡಲು ಆರಂಭಿಸುವುದಾಗಿ ರಷ್ಯಾದ ಕ್ಷಿಪಣಿ ನಿರ್ಮಾಣ ಸಂಸ್ಥೆ ಅಲ್ಮಾಝ್ ಅಂಟೇ ತಿಳಿಸಿದೆ.
ರಷ್ಯಾದ ವಾಯು ಮತ್ತು ಬಾಹ್ಯಾಕಾಶ ರಕ್ಷಣಾ ಉಸ್ತುವಾರಿ ಸಂಸ್ಥೆ ಅಲ್ಮಾಝ್ ಅಂಟೆಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವ್ಯಾಚೆಸ್ಲಾವ್ ಡಿಜಿರ್ಕ್ಲಾನ್ ಅವರು ಈ ಬಗ್ಗೆ ಮಾತನಾಡಿದ್ದು, 2021.ರ ಅಂತ್ಯದಲ್ಲಿ ಭಾರತಕ್ಕೆ ಎಸ್- 400 ಗಳನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧ ಮಾಡಿಕೊಳ್ಳಲಾದ ಒಪ್ಪಂದಕ್ಕೆ ಅನುಗುಣವಾಗಿ ನಾವು 2021 ರ ಅಂತ್ಯದಲ್ಲಿ ಭಾರತಕ್ಕೆ ಕ್ಷಿಪಣಿ ವ್ಯವಸ್ಥೆ ಒದಗಿಸುವುದನ್ನು ದೃಢೀಕರಿಸುವುದಾಗಿ ಅವರು ತಿಳಿಸಿದ್ದಾರೆ. ಈಗಾಗಲೇ ಎಸ್ – 400 ತರಬೇತಿ ಕಾರ್ಯಾಗಾರದಲ್ಲಿ ಭಾರತೀಯ ಮಿಲಿಟರಿ ಸಿಬ್ಬಂದಿಗಳು ಪಾಲ್ಗೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ.
ಈ ಕ್ಷಿಪಣಿ ಖರೀದಿಗೆ ಸಂಬಂಧಿಸಿದಂತೆ 2018 ರಲ್ಲಿ. ಭಾರತವು ರಷ್ಯಾದ ಜೊತೆಗೆ 5.43 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.