ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಇಬ್ಬರು ಉಗ್ರರನ್ನು ಸಂಹರಿಸಲಾಗಿದೆ.
ರಾಜ್ಯದ ಅಲೂಚಿ ಬಾಗ್ ಪ್ರದೇಶದಲ್ಲಿ ಟಾಪ್ ಕಮಾಂಡರ್ ಉಗ್ರನೊಬ್ಬನನ್ನು ಒಳಗೊಂಡಂತೆ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರದ ಪೊಲೀಸರು ವಧಿಸಿದ್ದಾರೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗೆ ಸಿಕ್ಕ ದೊಡ್ಡ ಮಟ್ಟದ ಯಶಸ್ಸು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಧಿಸಲ್ಪಟ್ಟ ಉಗ್ರರನ್ನು ಎಲ್ಇಟಿ (ಲಷ್ಕರ್ – ಎ- ತೈಬಾ) ದ ಟಾಪ್ ಕಮಾಂಡರ್ ಉಗ್ರಗಾಮಿ ಅಬ್ಬಾಸ್ ಶೇಕ್ ಮತ್ತು ಎರಡನೇ ಕಮಾಂಡರ್ ಸಕೀಬ್ ಮಂಜೂರ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.