ಬೆಂಗಳೂರು: ಉತ್ಥಾನ ಮಾಸಪತ್ರಿಕೆಯ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು’ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ರಾಷ್ಟ್ರೋತ್ಥಾನ ಪರಿಷತ್ನಲ್ಲಿ ನಡೆದ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಆರ್. ವೇಣುಗೋಪಾಲ್, ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ರೀನಿವಾಸ ಬಳ್ಳಿ, ರಾಜೀವ್ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ನರಸಿಂಹಮೂರ್ತಿ, ಬೆಸ್ಟೀ ವಿಶ್ವವಿದ್ಯಾಲಯದ ಕುಲಪತಿ ಡಾ. ರೂಪಾ ವಾಸುದೇವನ್, ಬಿ.ಎಂ.ಎಸ್. ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಪರೀಕ್ಷಾ ಕುಲಪತಿ ಡಾ. ಮಂಜುನಾಥ ಭಟ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರವಿಶಂಕರ್, ದಯಾನಂದ ಸಾಗರ್ ದಂತವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಹೇಮಂತ್ ಸೇರಿದಂತೆ ಶಿಕ್ಷಣ ತಜ್ಞರು, ಶೈಕ್ಷಣಿಕ ಸಂಸ್ಥೆಗಳ ಮುಖಂಡರು, ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಪಾಲ್ಗೊಂಡಿದ್ದರು.
ಪ್ರಬಂಧ ಸ್ಪರ್ಧೆಯ ವಿಷಯ: ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು
ಈ ಸ್ಪರ್ಧೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
ಪ್ರಬಂಧ ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ಇರುತ್ತದೆ.
ಮೇಲಿನ ವಿಷಯದ ಕುರಿತಾಗಿ 1500 ಪದಗಳಿಗೆ ಮೀರದಂತೆ ಪ್ರಬಂಧವನ್ನು ಬರೆದು ಇಮೇಲ್ ಮೂಲಕ utthanacompetitions@gmail.com / ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ನವೆಂಬರ್ 20 ರ ಒಳಗೆ ಕಳುಹಿಸಬೇಕು.
ಬಹುಮಾನ
ಮೊದಲ ಬಹುಮಾನ: ರೂ. 10,000 /-
ಎರಡನೆಯ ಬಹುಮಾನ: ರೂ. 7,000 /-
ಮೂರನೆಯ ಬಹುಮಾನ: ರೂ. 5,000/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,000/-
ಪ್ರಬಂಧ ನಮಗೆ ತಲಪಲು ಕೊನೆಯ ದಿನಾಂಕ: ನವೆಂಬರ್ 10, 2021
ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ:
ಸಂಪಾದಕರು,
‘ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – 2021
‘ಕೇಶವ ಶಿಲ್ಪ’, ಕೆಂಪೇಗೌಡನಗರ,
ಬೆಂಗಳೂರು – 560 004
utthanacompetitions@gmail.com
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7795441894 / 08026604673
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.