ನವದೆಹಲಿ: ತಾಲಿಬಾನಿಗಳ ಕೈವಶವಾದ ಅಫ್ಘಾನಿಸ್ಥಾನದಿಂದ ನ್ಯಾಟೊ ಮತ್ತು ಅಮೆರಿಕ ಯುದ್ಧ ವಿಮಾನದ ಮೂಲಕ ಕತಾರ್ಗೆ ಸ್ಥಳಾಂತರಗೊಂಡಿದ್ದ 146 ಭಾರತೀಯರನ್ನು ದೋಹಾದಿಂದ ನಾಲ್ಕು ವಿಮಾನಗಳಲ್ಲಿ ಭಾರತಕ್ಕೆ ಕರೆತರಲಾಯಿತು.
ದೋಹಾದಿಂದ ನಿನ್ನೆಯಷ್ಟೇ 135 ಜನರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗಿತ್ತು. ಇವರೆಲ್ಲರೂ ಅಫ್ಘಾನಿಸ್ಥಾನದ ವಿವಿಧ ಕಂಪೆನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಾಗಿದ್ದರು. ಇಂದು ಭಾರತಕ್ಕೆ ಸುರಕ್ಷಿತವಾಗಿ ಮರಳಿದವರಲ್ಲಿ ವಿಸ್ತಾರಾ ವಿಮಾನದಲ್ಲಿ 104 ಮಂದಿ, ಕತಾರ್ ಏರ್ವೇಸ್ನಲ್ಲಿ 30 ಮಂದಿ, ಇಂಡಿಗೋದಲ್ಲಿ 11 ಮಂದಿ, ಏರ್ ಇಂಡಿಯಾದಲ್ಲಿ ಓರ್ವರು ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಸಂಸ್ಥೆಯಿಂದಲೂ ಅಫ್ಘಾನಿಸ್ಥಾನದಲ್ಲಿ ಸಂತ್ರಸ್ತರಾಗಿರುವವರ ಸುರಕ್ಷಿತ ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿದ್ದು, 120 ಜನರನ್ನು ಈಗಾಗಲೇ ಕಜಕಿಸ್ಥಾನದ ಅಲ್ಮಾಟಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.