ಬೆಂಗಳೂರು: ಶೀಘ್ರದಲ್ಲೇ ಮಕ್ಕಳಿಗೆ ನೀಡುವ ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ ತುರ್ತು ಬಳಕೆಗೆ. ಡಿಸಿಜಿಐ ಮತ್ತು ಕೇಂದ್ರ ಸರ್ಕಾರ ಅನುಮತಿ ನೀಡಲಿರುವುದಾಗಿ ಮೂಲಗಳು ಹೇಳಿವೆ.
ಈ ಲಸಿಕೆಯ ಕ್ಲಿನಿಕಲ್ ಪ್ರಯೋಗ ಪೂರ್ಣಗೊಳ್ಳುವ ಮೊದಲೇ ಮಕ್ಕಳಿಗೆ ನೀಡಲು ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂಬುದಾಗಿಯೂ ಐಎಎಎನ್ಎಸ್ ಮೂಲಗಳನ್ನು ಉಲ್ಲೇಖ ಮಾಡಿ ವರದಿ ಮಾಡಿದೆ. ಈ ಲಸಿಕೆಯ ಎರಡು ಡೋಸ್ ಪಡೆದ ಮಕ್ಕಳಲ್ಲಿ ಸೃಷ್ಟಿಯಾದ ಪ್ರತಿಕಾಯಗಳ ಪರಿಣಾಮದ ಬಗ್ಗೆ ಮೂರನೇ ಬಾರಿಗೆ ಪರಿಶೀಲನೆ ನಡೆಸಲು ರಕ್ತದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ 90 ಮಕ್ಕಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಈ ಪ್ರಯೋಗ ಸಂಪೂರ್ಣವಾಗಲು ಇನ್ನೂ 210 ದಿನಗಳು ಬೇಕಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಡಿಸಿಜಿಐ ಈ ಲಸಿಕೆಯ ಬಳಕೆಗೆ ತುರ್ತು ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.