ನವದೆಹಲಿ: ಕ್ವಾಡ್ ರಾಷ್ಟ್ರಗಳು ಆ. 26 -29 ರ ವರೆಗೆ ನಡೆಸಲಿರುವ ‘ಮಲಬಾರ್ ಸಮರಾಭ್ಯಾಸ’ ದಲ್ಲಿ ಭಾಗವಹಿಸಲು ಭಾರತದ ಎರಡು ಯುದ್ಧನೌಕೆಗಳು ಗುವಾಮ್ ದ್ವೀಪವನ್ನು ತಲುಪಿವೆ.
ಸಂಕೀರ್ಣವಾದ ತಾಲೀಮಿನಲ್ಲಿ ದೇಶದ ಐಎನ್ಎಸ್ ಶಿವಾಲಿಕ್ ಹಾಗೂ ಐಎನ್ಎಸ್ ಕದಮತ್ ನೌಕೆಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿವೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ.
ಗುವಾಮ್ ದ್ವೀಪವು ಪೆಸಿಫಿಕ್ ಸಾಗರದಲ್ಲಿದ್ದು, ಅಮೆರಿಕದ ಆಡಳಿತಕ್ಕೆ ಒಳಪಟ್ಟಿದೆ. ಈ ಸಮರಾಭ್ಯಾಸದಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ, ಜಪಾನ್ ದೇಶಗಳ ಯುದ್ಧನೌಕೆಗಳು ಭಾಗವಹಿಸಲಿವೆ. ಇಂಡೋ – ಪೆಸಿಫಿಕ್ ಪ್ರದೇಶದಲ್ಲಿ ಚೀನಾ ತನ್ನ ಪ್ರಾಬಲ್ಯ ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ಸಮರಾಭ್ಯಾಸವನ್ನು ಕ್ವಾಡ್ ರಾಷ್ಟ್ರಗಳು ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.