ನವದೆಹಲಿ: ರಾಜ್ಯಕ್ಕೆ ಹೂಡಿಕೆಯನ್ನು ತರುವ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸುತ್ತಿರುವ ಉತ್ತರಪ್ರದೇಶ ಸರಕಾರಕ್ಕೆ ಮಹತ್ವದ ಗೆಲುವು ಸಿಗುತ್ತಿದ್ದು, ಮೈಕ್ರೋಸಾಫ್ಟ್, MAQ ಸಾಫ್ಟ್ವೇರ್ ಮತ್ತು ಪೆಪ್ಸಿಕೋ ಉತ್ತರಪ್ರದೇಶದಲ್ಲಿ ಒಟ್ಟು 2,866 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಸಜ್ಜಾಗಿ ನಿಂತಿವೆ.
ಈ ಹೂಡಿಕೆಯು ಉತ್ತರಪ್ರದೇಶದಲ್ಲಿ 7500 ಉದ್ಯೋಗವನ್ನು ಸೃಷ್ಟಿ ಮಾಡಲಿದೆ. ಮಾತ್ರವಲ್ಲದೆ ಅಲ್ಲಿನ ಆರ್ಥಿಕ ಪ್ರಗತಿಗೆ ಉತ್ತೇಜನವನ್ನು ನೀಡಲಿದೆ.
ಕೈಗಾರಿಕೆ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಮೈಕ್ರೋಸಾಫ್ಟ್ ಮತ್ತು MAQ ಸಾಫ್ಟ್ವೇರ್ ನೊಯ್ಡಾದಲ್ಲಿ ತಮ್ಮ ಸೌಲಭ್ಯವನ್ನು ಸ್ಥಾಪನೆ ಮಾಡಲಿದೆ. ಪೆಪ್ಸಿಕೊ ಮಥುರಾದಲ್ಲಿ ತನ್ನ ಸೌಲಭ್ಯವನ್ನು ಹೊಂದಲಿದೆ.
ಮಾತ್ರವಲ್ಲದೆ ಯೋಗಿ ಸರಕಾರದ ನಾಲ್ಕುವರೆ ವರ್ಷಗಳಲ್ಲಿ ಸುಮಾರು 40 ವಿದೇಶಿ ಕಂಪನಿಗಳು 17 ಸಾವಿರ ಕೋಟಿ ರೂಪಾಯಿಗಳನ್ನು ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿವೆ ಎಂದು ಹೇಳಲಾಗಿದೆ.
ಯೋಗಿ ಸರಕಾರದ ಹೂಡಿಕೆ ಸ್ನೇಹಿ ನೀತಿಗಳು ಮತ್ತು ಕ್ರಮಗಳಿಂದಾಗಿ ಇನ್ನು ಹೆಚ್ಚಿನ ಸಂಖ್ಯೆಯ ಕಂಪನಿಗಳು ಉತ್ತರಪ್ರದೇಶದಲ್ಲಿ ಹೂಡಿಕೆ ಮಾಡಲು ಉತ್ಸಾಹವನ್ನು ತೋರಿಸುತ್ತಿವೆ. ಅಡೋಬ್, ಅಮೆಜಾನ್, ಟವರ್ ಕಾರ್ಪೊರೇಷನ್ ಆಫ್ ಅಮೆರಿಕ, ಆ್ಯಪಲ್, ಕ್ಯಾಟರ್ಪಿಲ್ಲರ್, ಡೆಲ್ಫಿ ಮತ್ತು ಸಿಸ್ಕೋ ಕಂಪನಿಗಳು ಮಾತುಕತೆಯಲ್ಲಿ ಇವೆ ಎಂದು ಹೇಳಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.