ವಾರಣಾಸಿ: ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯವು ದೇಶದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಹಿಂದೂ ಧರ್ಮದ ಬಗ್ಗೆ ಪದವಿ ಕೋರ್ಸ್ ಅನ್ನು ಆರಂಭಿಸಿದೆ.
ಈ ಸಂಬಂಧ ವಿವಿಯ ಉಪಕುಲಪತಿ ವಿಜಯ್ ಕುಮಾರ್ ಶುಕ್ಲ ಅವರು ಮಾಹಿತಿಯನ್ನು ನೀಡಿದ್ದು, ವಿದ್ಯಾರ್ಥಿಗಳಿಗೆ ಪ್ರಾಚೀನ ವಿಚಾರಗಳ ಜ್ಞಾನ, ಕಲೆ, ವಿಜ್ಞಾನ ಮೊದಲಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅವಕಾಶ ನೀಡುವ ಸಲುವಾಗಿ ಕೋರ್ಸ್ ಆರಂಭಿಸಿದ್ದಾಗಿ ಹೇಳಿದ್ದಾರೆ.
ಹಿಮಾಚಲದ ವಿವಿಯಲ್ಲಿ ಹಿಂದೂ ಧರ್ಮದ ಡಿಪ್ಲೋಮಾ ಕೋರ್ಸ್ ಮಾತ್ರ ನಡೆಯುತ್ತಿದ್ದು, ದೇಶದಲ್ಲೇ ಹಿಂದೂ ಧರ್ಮದ ಬಗ್ಗೆ ಪದವಿ ನೀಡುತ್ತಿರುವ ವಿವಿಯಾಗಿ ಬನಾರಸ್ ಹಿಂದೂ ವಿದ್ಯಾಲಯ ಖ್ಯಾತಿ ಪಡೆಯಲಿದೆ ಎಂದು ಹೇಳಿದ್ದಾರೆ.
ಈ ಕೋರ್ಸ್ ಅನ್ನು ವಿವಿಯ ತತ್ವಶಾಸ್ತ್ರ ವಿಭಾಗ ನಡೆಸಲಿದೆ. ಪುರಾತನ ವಾಸ್ತುಶಿಲ್ಪ, ಪುರಾತನ ವ್ಯಾಪಾರ ವ್ಯವಸ್ಥೆ, ವೈಜ್ಞಾನಿಕ ಅಂಶಗಳು, ಹಿಂದೂ ಚಕ್ರವರ್ತಿಗಳು, ಆಯುಧಗಳು ಸೇರಿದಂತೆ ಇನ್ನೂ ಹಲವು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಮೂಲಕ ಜ್ಞಾನ ಒದಗಿಸಲಾಗುವುದು ಎಂದು ಶುಕ್ಲ ಹೇಳಿದ್ದಾರೆ. ಹಾಗೆಯೇ ರಾಮಾಯಣ, ಮಹಾಭಾರತ ಅಂಶಗಳನ್ನು ಸಹ ಈ ಕೋರ್ಸ್ನಲ್ಲಿ ಕಲಿಸಲಾಗುತ್ತದೆ. ಸ್ವಾಮಿ ವಿವೇಕಾನಂದರ ತತ್ವಗಳನ್ನು ಸಹ ಅಧ್ಯಯನ ವಿಷಯವಾಗಿ ತಿಳಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಂಸ್ಕೃತ ಇಲಾಖೆಯು ಗ್ರಂಥಗಳ ಪ್ರಾಯೋಗಿಕ ಅಂಶಗಳನ್ನು, ವೇದಗಳನ್ನು, ಪ್ರಾಚೀನ ದಾಖಲೆಗಳನ್ನು ಮಂತ್ರಗಳ ಮೂಲಕ ಚರ್ಚಿಸುತ್ತದೆ. ಎರಡು ವರ್ಷಗಳ ಈ ಕೋರ್ಸ್ನ್ನು 40 ಸೀಟುಗಳೊಂದಿಗೆ ಆರಂಭಿಸಲಾಗುತ್ತದೆ. ಸೆ. 7 ರಂದು ಅರ್ಜಿ ನಮೂನೆಗಳನ್ನು ಸ್ವೀಕರಿಸಲಾಗುವುದು. ಅಕ್ಟೋಬರ್ 3 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಶುಕ್ಲ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.