ನವದೆಹಲಿ: ರೆಡಾರ್ ಅಪಾಯದಿಂದ ಭಾರತೀಯ ಯುದ್ಧ ವಿಮಾನಗಳನ್ನು ಸಂರಕ್ಷಣೆ ಮಾಡಲು ಡಿಆರ್ಡಿಒ ಸುಧಾರಿತ ಚಾಫ್ ಟೆಕ್ನಾಲಜಿ ಯನ್ನು ಅಭಿವೃದ್ಧಿ ಮಾಡಿದೆ.
ಡಿಆರ್ಡಿಒ, ಜೋಧ್ಪುರದ ರಕ್ಷಣಾ ಪ್ರಯೋಗಾಲಯ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬ್ ಸಹಯೋಗದಲ್ಲಿ ಈ ಸುಧಾರಿತ ಚಾಫ್ ಮೆಟೀರಿಯಲ್ ಮತ್ತು ಚಾಫ್ ಕಾಟ್ರಿಡ್ಜ್ – 118/ಐ ಅನ್ನು ಅಭಿವೃದ್ಧಿ ಮಾಡಲಾಗಿದೆ.
ಈ ಪ್ರಯತ್ನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದು, ಸ್ವಾವಲಂಬಿ ಭಾರತ ನಿರ್ಮಾಣ ಕಾರ್ಯದಲ್ಲಿ ಇದೊಂದು ದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ವಾಯುಪಡೆಯು, ಯಶಸ್ವಿ ಬಳಕೆದಾರ ಪ್ರಯೋಗಗಳನ್ನು ಪೂರ್ಣಗೊಳಿಸಿದ ಬಳಿಕ ಈ ತಂತ್ರಜ್ಞಾನ ಪರಿಚಯಿಸುವ ಪ್ರಕ್ರಿಯೆ ಆರಂಭಿಸಲಿರುವುದಾಗಿ ಡಿಆರ್ಡಿಒ ತಿಳಿಸಿದೆ. ರೆಡಾರ್ಗಳಿಂದ ವಿಮಾನಗಳ ರಕ್ಷಣೆ, ಪ್ರತಿ ಅಳತೆ ವಿತರಣಾ ವ್ಯವಸ್ಥೆಯನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಇದು ಇನ್ಫ್ರಾ ರೆಡ್ ಮತ್ತು ರೇಡಾರ್ ಬೆದರಿಕೆಗಳ ವಿರುದ್ಧ ನಿಷ್ಕ್ರಿಯ ಜ್ಯಾಮಿಂಗ್ ಒದಗಿಸಲಿದೆ ಎಂದು ಪ್ರಕಟಣೆ ಹೇಳಿದೆ.
ಈ ತಂತ್ರಜ್ಞಾನ ಗಾಳಿಯಲ್ಲಿ ನಿಯೋಜಿಸಲಾದ ಚಾಫ್ ಮೆಟೀರಿಯಲ್ ಕಡಿಮೆ ಪ್ರಮಾಣದಲ್ಲಿ ಯುದ್ಧ ವಿಮಾನಗಳ ಸುರಕ್ಷತೆಯನ್ನು ಖಾತ್ರಿ ಮಾಡಲು, ಶತ್ರು ಕ್ಷಿಪಣಿಗಳನ್ನು ಹಾಳುಗೆಡವಲು ಸಹಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.