ನವದೆಹಲಿ: ರಸ್ತೆಯ ತಿರುವುಗಳಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು ಮತ್ತು ವ್ಯವಸ್ಥಿತವಾಗಿ ವಾಹನ ಸಂಚಾರ ನಿರ್ವಹಿಸಲು ‘ಸ್ಮಾರ್ಟ್ ರೋಡ್ ಮಾನಿಟರಿಂಗ್ ಸಿಸ್ಟಮ್’ ಅನ್ನು ಹಿಮಾಚಲದ ಮಂಡಿಯ ಐಐಟಿಯ ಸಂಶೋಧಕರು ಅಭಿವೃದ್ಧಿ ಮಾಡಿದ್ದಾರೆ.
ಈ ನೂತನ ವ್ಯವಸ್ಥೆಗೆ ಇನ್ನಷ್ಟೇ ಹಕ್ಕುಸ್ವಾಮ್ಯ ಸಿಗಬೇಕಿದೆ. ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ವಾಹನಗಳ ವೇಗ ಪತ್ತೆ ಮಾಡುವುದು, ವಾಹನಗಳ ಸಂಖ್ಯೆ ಲೆಕ್ಕ ಮಾಡುವುದು, ರಸ್ತೆ ಬಳಕೆ ಕ್ರಮ, ಸಂಚಾರ ನಿರ್ವಹಣೆ ಉತ್ತಮ ಪಡಿಸಲು ಸಾಧ್ಯವಾಗಲಿದೆ ಎಂದು ಐಐಟಿ ತಿಳಿಸಿದೆ. ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನ, ಮೈಕ್ರೋ ಎಲೆಕ್ಟ್ರೋ ಮತ್ತು ಮೆಕ್ಯಾನಿಕಲ್ ಸಿಸ್ಟಮ್ ಮೂಲಕ ಇದು ಕಾರ್ಯ ನಿರ್ವಹಿಸಲಿದೆ.
ವಾಹನಗ ಸಂಖ್ಯೆ ಹೆಚ್ಚಾಗುತ್ತಿರುವಂತೆ, ಅಪಘಾತಗಳ ಸಂಖ್ಯೆಯೂ ಏರುತ್ತಿದೆ. ಈ ನಿಟ್ಟಿನಲ್ಲಿ ಸಂಭವನೀಯ ಅಪಘಾತಗಳನ್ನು ತಡೆಯಲು ಈ ವ್ಯವಸ್ಥೆ ಸಹಾಯ ಮಾಡಲಿದೆ. ಈ ವ್ಯವಸ್ಥೆ ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಉಭಯ ದಿಕ್ಕಿನಲ್ಲಿ ಬರುವ ವಾಹನಗಳನ್ನು ಗುರುತಿಸಿ ಚಾಲಕರಿಗೆ ಎಚ್ಚರಿಕೆ ನೀಡುತ್ತದೆ. ಹಾಗೆಯೇ ವಾಹನದ ದಿಕ್ಕು, ವೇಗ, ಸ್ವರೂಪದ ಬಗೆಗೂ ಮಾಹಿತಿ ಕಲೆ ಹಾಕಲಿದೆ. ಆ ಬಳಿಕ ಮತ್ತೊಂದು ದಿಕ್ಕಿನಲ್ಲಿ ಬರುವ ವಾಹನಗಳಿಗೆ ಶಬ್ದ, ಬೆಳಕಿನ ಮೂಲಕ ಸೂಚನೆ ರವಾನಿಸಲಿದೆ ಎಂದು ಐಐಟಿ ಸಂಶೋಧಕರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.