ನವದೆಹಲಿ: ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ವಿಧ್ವಂಸಕ ಕೃತ್ಯ ನಡೆಸಲು ಹುನ್ನಾರ ನಡೆಸಿದ್ದ ಪಾಕಿಸ್ಥಾನ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ 4 ಉಗ್ರರನ್ನು ಜಮ್ಮು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ.
ಕಾಶ್ಮೀರದ ಜೈಷ್ ಇ ಮೊಹಮ್ಮದ್ ಉಗ್ರರ ಅಡಗುತಾಣಗಳ ಮೇಲೆ ಇಂದು ಜಮ್ಮು ಕಾಶ್ಮೀರದ ಪೊಲೀಸರು ದಾಳಿ ನಡೆಸಿ ನಾಲ್ವರು ಉಗ್ರರನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ಹೇಳಿವೆ. ದೇಶದ ಸ್ವಾತಂತ್ರ್ಯ ದಿನದಂದು ದಾಳಿ ಮಾಡಲು ಈ ಉಗ್ರಗಾಮಿಗಳು ಸಂಚು ಹೂಡಿದ್ದರು. ಜಮ್ಮುವಿನಲ್ಲಿ ವಾಹನದಲ್ಲಿ ಐಇಡಿ ಇರಿಸಿ, ಅದನ್ನು ಸ್ಫೋಟಿಸಲು ಈ ಉಗ್ರಗಾಮಿಗಳು ಹುನ್ನಾರ ಮಾಡಿದ್ದರು.
ಹಾಗೆಯೇ ಈ ಉಗ್ರರು ಡ್ರೋಣ್ ನಲ್ಲಿ ಶಸ್ತ್ರಾಸ್ತ್ರಗಳನ್ನು ತುಂಬಿ ಕಾಶ್ಮೀರದಲ್ಲಿರುವ ಉಗ್ರರಿಗೂ ರವಾನಿಸುತ್ತಿದ್ದರು. ಈ ನಾಲ್ವರ ಬಂಧನದಿಂದ ಸಂಭಾವ್ಯ ಅನಾಹುತ ಒಂದನ್ನು ಪೊಲೀಸರು ತಪ್ಪಿಸಿದಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.