ನವದೆಹಲಿ: 75 ರ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತಕ್ಕೆ ‘ಎಕೆ – 203’ ರೈಫಲ್ಗಳನ್ನು ದೇಶೀಯವಾಗಿ ಉತ್ಪಾದನೆ ಮಾಡಲು ರಷ್ಯಾ ಸಮ್ಮತಿ ನೀಡಿದೆ.
ಈ ರೈಫಲ್ಗಳು ಎಕೆ-47 ರೈಫಲ್ಗಳಷ್ಟೇ ಪರಿಣಾಮಕಾರಿ ರೈಫಲ್ಗಳಾಗಿವೆ. ಈ ರೈಫಲ್ಗಳನ್ನು ರಷ್ಯಾದ ಮಿಖಾಯಿಲ್ ಕಲಾಶ್ನಿಕೋವ್ ಎಂಬಾತ ವಿನ್ಯಾಸಗೊಳಿಸಿದ್ದಾನೆ. ಈ ರೈಫಲ್ ಅತ್ಯಂತ ತೀಕ್ಷ್ಣ ಮತ್ತು ಚುರುಕಾದ ದಾಳಿಗೆ ಹೆಸರುವಾಸಿಯಾಗಿದ್ದು, ಜಗತ್ತಿನೆಲ್ಲೆಡೆ ಈ ರೈಫಲ್ಗಳಿಗೆ ಭಾರೀ ಬೇಡಿಕೆ ಇದೆ.
ಎಕೆ-203 ರೈಫಲ್ಗಳನ್ನು ದೇಶೀಯವಾಗಿ ತಯಾರಿಸುವುದಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷಗಳಿಂದ ಭಾರತ ಮತ್ತು ರಷ್ಯಾ ನಡುವೆ ಮಾತುಕತೆ ನಡೆಯುತ್ತಿತ್ತು. ಈ ರೈಫಲ್ಗಳ ತಯಾರಿಕೆಗೆ ಸಂಬಂಧಿಸಿದಂತೆ 5,125 ಕೋಟಿ ರೂ.ಗಳ ಒಪ್ಪಂದಕ್ಕೆ ರಷ್ಯಾ ಇದೀಗ ಒಪ್ಪಿಗೆ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ಈ ರೈಫಲ್ಗಳ ಉತ್ಪಾದನೆ ನಡೆಯಲಿದ್ದು, ಇಂಡೋ ರಷ್ಯನ್ ಪ್ರೈವೇಟ್ ಲಿ. ಈ ರೈಫಲ್ಗಳನ್ನು ತಯಾರಿಸಲಿದೆ. ಕೆಲವೇ ವರ್ಷಗಳಲ್ಲಿ ಆರು ಲಕ್ಷ ರೈಫಲ್ಗಳನ್ನು ಉತ್ಪಾದಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.
ದೇಶದ ಭದ್ರತಾ ಪಡೆಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ದೇಶೀಯವಾಗಿ ಎಕೆ – 203 ಬಂದೂಕುಗಳ ತಯಾರಿಕೆಗೂ ರಷ್ಯಾ ಅನುಮತಿ ನೀಡಿರುವುದು ದೇಶದ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಹೆಜ್ಜೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.