ಹುಬ್ಬಳ್ಳಿ: ಸರಕು ಸಾಗಾಟಕ್ಕೆ ಸಂಬಂಧಿಸಿದಂತೆ ನಗರದ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಘಟಕಗಳನ್ನು ಆರಂಭಿಸುವ ಕನಸು ಸಾಕಾರಗೊಳ್ಳುವ ದಿನಗಳು ಸಮೀಪಿಸಿವೆ ಎಂದು ವಿಮಾನ ನಿಲ್ದಾಣ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.
ಈ ಟ್ವೀಟ್ ಅನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಹ ಮರು ಟ್ವೀಟ್ ಮಾಡಿದ್ದಾರೆ.
ಈಗಾಗಲೇ ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಸರಕು ಸಾಗಾಟ ವಿಮಾನ ಸೇವೆ ಆರಂಭವಾಗಿದೆ. ಆದರೆ ಸರಕುಗಳ ತಪಾಸಣೆ ಮತ್ತು ನಿರ್ವಹಣೆಗೆ ಈಗಿರುವ ವ್ಯವಸ್ಥೆಯನ್ನೇ ಬಳಕೆ ಮಾಡಲಾಗುತ್ತಿತ್ತು. ಈಗಿರುವ ಪ್ರಯಾಣಿಕ ವಿಭಾಗದ ವ್ಯವಸ್ಥೆಗಳನ್ನೇ ಬಳಸಿಕೊಂಡು ಈ ಸೇವೆ ಒದಗಿಸಲಾಗುತ್ತಿತ್ತು.
ಆದರೆ ಇದೀಗ ಸರಕು ಸಾಗಾಟಕ್ಕೆಂದೇ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರತ್ಯೇಕ ಟರ್ಮಿನಲ್ ರೂಪುಗೊಳಿಸಲಾಗಿದೆ. ಕೊನೆತ ಹಂತದ ಕಾಮಗಾರಿ, ಪರಿಶೀಲನೆಗಳು ಮುಗಿಯುತ್ತಲೇ ಈ ಟರ್ಮಿನಲ್ ಕಾರ್ಯಾರಂಭ ಮಾಡಲಿದೆ ಎಂದು ವಿಮಾನ ನಿಲ್ದಾಣ ತಿಳಿಸಿದೆ.
AAI,s Hubballi Airport becoming Cargo hub for North Karnataka.Air cargo services through existing passenger terminal building is already operational since 14th March21 & Dedicated Air Cargo Terminal is also redy for commissioning.Awaiting final Security approval .@AAI_Official pic.twitter.com/DN8RLt66Lc
— Hubballi Airport (@aaihbxairport) August 13, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.