ನವದೆಹಲಿ: ದೇಶದ 75 ನೇ ಸ್ವಾತಂತ್ರ್ಯ ಸಂಭ್ರಮದ ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, 1947 ರ ಸ್ವಾತಂತ್ರ್ಯ ಬಳಿಕ ಬಿಡುಗಡೆಯಾದ ಅಂಚೆಚೀಟಿಯ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಸ್ವಾತಂತ್ರ್ಯದ ಸವಿನೆನಪಿಗಾಗಿ 1947 ರಲ್ಲಿ ಈ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದು ಸ್ವತಂತ್ರ ಭಾರತದ ಮೊದಲ ಅಂಚೆಚೀಟಿ ಎಂದು ವೈಷ್ಣವ್ ಬರೆದುಕೊಂಡಿದ್ದಾರೆ. ಈ ಅಂಚೆ ಚೀಟಿಯು 15 ಆಗಸ್ಟ್ 1947 ರದ್ದಾಗಿದ್ದು, ಭಾರತದ ತ್ರಿವರ್ಣ ಧ್ವಜ ಮೋಡಗಳೆತ್ತರಕ್ಕೆ ಹಾರಾಡುತ್ತಿದೆ. ಹಾಗೆಯೇ ಮೇಲಿನ ಬಲಭಾಗದಲ್ಲಿ ‘ಜೈ ಹಿಂದ್’ ಎಂಬ ಘೋಷಣೆಯನ್ನು ಮತ್ತು ಕೆಳ ಭಾಗದಲ್ಲಿ ‘ಇಂಡಿಯಾ ಪೋಸ್ಟೇಜ್’ ಎಂದು ಬರೆಯಲಾಗಿದೆ.
ಈ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿರುವ ಅವರು, ಈ ತ್ರಿವರ್ಣ ಧ್ವಜದ ಚಿತ್ರವುಳ್ಳ ಅಂಚೆ ಚೀಟಿ, ದೇಶದ ಮೊದಲ ಅಂಚೆಚೀಟಿಯಾಗಿದೆ. ಇದನ್ನು ನವೆಂಬರ್ 21, 1947 ರಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮೂರು ಮತ್ತು ಒಂದೂವರೆ ಆಣೆ ಮೌಲ್ಯವನ್ನು ಹೊಂದಿದೆ. ವಿದೇಶಿ ಪತ್ರವ್ಯವಹಾರಗಳಿಗಾಗಿ ಇದನ್ನು ಬಿಡುಗಡೆ ಮಾಡಲಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಇನ್ನೊಂದು ಟ್ವೀಟ್ನಲ್ಲಿ ಅವರು 1980 ರ ಸಂದರ್ಭದಲ್ಲಿ ಹೊರಡಿಸಲಾದ ಇನ್ನೂ ಎರಡು ಅಂಚೆಚೀಟಿಗಳನ್ನು ಹಂಚಿಕೊಂಡಿದ್ದಾರೆ. ಇದು ಗಾಂಧಿ ಅವರ ದಂಡಿ ಸತ್ಯಾಗ್ರಹ ಮತ್ತು ಉಪ್ಪಿನ ಸತ್ಯಾಗ್ರಹದ ಚಿತ್ರಗಳನ್ನು ಒಳಗೊಂಡ ಅಂಚೆಚೀಟಿಗಳಾಗಿವೆ.
Postage Stamp issued in 1947 to commemorate India’s Independence. #AzadiKaAmritMahotsav pic.twitter.com/qsY3OEQrEN
— Ashwini Vaishnaw (@AshwiniVaishnaw) August 12, 2021
A set of two stamps was issued on
02.10.1980 depicting the Dandi March and Salt Satyagraha – an epic non-violent protest in India’s freedom movement. #AzadiKaAmritMahotsav pic.twitter.com/6s5OsaafPy— Ashwini Vaishnaw (@AshwiniVaishnaw) August 13, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.