ನವದೆಹಲಿ: ತನಿಖಾ ಶ್ರೇಷ್ಠತೆಗಾಗಿ ಕರ್ನಾಟಕದ ಆರು ಮಂದಿ ಪೊಲೀಸರು ಸೇರಿದಂತೆ 2021 ನೇ ಸಾಲಿನಲ್ಲಿ 152 ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಪದಕ ಪ್ರದಾನಿಸಿ ಗೌರವಿಸಲಾಗಿದೆ.
ಅಪರಾಧ ತನಿಖೆಯ ಉನ್ನತ ವೃತ್ತಿಪರ ಗುಣಮಟ್ಟಕ್ಕಾಗಿ 28 ಮಹಿಳಾ ಅಧಿಕಾರಿಗಳು ಸೇರಿದಂತೆ 152 ಪೊಲೀಸರಿಗೆ ಈ ಪದಕವನ್ನು ನೀಡಿ ಗೌರವಿಸಲಾಗಿದೆ. 2018 ರಿಂದ ತೊಡಗಿದಂತೆ ಅಪರಾಧ ತನಿಖೆಯ ವೃತ್ತಿಪರ ಗುಣಮಟ್ಟದ ಉತ್ತೇಜನಕ್ಕೆ ಈ ಪದಕವನ್ನು ನೀಡಿ ಗೌರವಿಸಲಾಗುತ್ತಿದೆ.
ಸಿಬಿಐನ 15 ಮಂದಿ, ಮಧ್ಯಪ್ರದೇಶ, ಮಹಾರಾಷ್ಟ್ರದ ತಲಾ 11 ಜನರು, ಉತ್ತರ ಪ್ರದೇಶದ 10, ಕೇರಳ, ರಾಜಸ್ಥಾನದ 9 ಮಂದಿ, ತಮಿಳುನಾಡಿನ 8 ಮಂದಿ, ಬಿಹಾರದ 7, ಗುಜರಾತ್, ಕರ್ನಾಟಕ, ನವದೆಹಲಿ ಪೊಲೀಸ್ ವಿಭಾಗದ 6 ಜನರು ಅಧಿಕಾರಿಗಳು ಸೇರಿದಂತೆ ಇತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಅಧಿಕಾರಿಗಳಿಗೆ ಪದಕ ಪ್ರದಾನಿಸಿ ಗೌರವಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.