ಕಾಬೂಲ್: ಆಫ್ಘಾನಿಸ್ಥಾನದಲ್ಲಿನ ನೆಟಿಜನ್ಗಳು ಪಾಕಿಸ್ಥಾನದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಅಭಿಯಾನವನ್ನು ಆರಂಭಿಸಿದ್ದಾರೆ. ತಮ್ಮ ದೇಶದ ವಿರುದ್ಧ ಪರೋಕ್ಷ ಯುದ್ಧವನ್ನು ಮಾಡಿಸುತ್ತಿರುವ ಪಾಕಿಸ್ಥಾನದ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅವರು ಜಗತ್ತಿನ ದೇಶಗಳಿಗೆ ಕರೆ ನೀಡಿದ್ದಾರೆ.
#SanctionPakistan 3 ಲಕ್ಷಕ್ಕೂ ಹೆಚ್ಚು ಟ್ವೀಟ್ಗಳನ್ನು ಹೊಂದುವ ಮೂಲಕ ಅಗ್ರ ಟ್ರೆಂಡಿಂಗ್ ಹ್ಯಾಶ್ಟ್ಯಾಗ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಕಾಬೂಲ್ ಮೂಲದ ಪತ್ರಕರ್ತ ಹಬೀಬ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನವನ್ನು ಆರಂಭಿಸಿದವರಾಗಿದ್ದಾರೆ.
“ನಮ್ಮ ದೇಶ ಉರಿಯುತ್ತಿದೆ. ಲಕ್ಷಾಂತರ ಜನರ ಜೀವನ, ಕುಟುಂಬಗಳು, ಮನೆಗಳು ಮತ್ತು ಕನಸುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಪ್ರತಿನಿತ್ಯ ಹತ್ಯೆ ಮಾಡಲಾಗುತ್ತಿದೆ. ನಗರಗಳು ಒಂದರ ನಂತರ ಒಂದರಂತೆ ಕುಸಿಯುತ್ತಿವೆ, ಪ್ರಪಂಚವು ಮಾನವ ದುರಂತವನ್ನು ನೋಡುತ್ತಿದೆ, ”ಎಂದು ಅವರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಕೆನಡಾದ ಮಾಜಿ ರಾಜಕಾರಣಿ ಮತ್ತು ರಾಜತಾಂತ್ರಿಕ ಕ್ರಿಸ್ ಅಲೆಕ್ಸಾಂಡರ್ ಟ್ವೀಟ್ ಮಾಡಿ “ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ನಡೆಸುತ್ತಿರುವ ಆಕ್ರಮಣವು ಯುಎನ್ ಚಾರ್ಟರ್ನ ಅಧ್ಯಾಯ VII ಅಡಿಯಲ್ಲಿ ಸಶಸ್ತ್ರ ದಾಳಿ ಮತ್ತು ಆಕ್ರಮಣಕಾರಿ ಕೃತ್ಯವಾಗಿದೆ. ಅಂತರರಾಷ್ಟ್ರೀಯ ಕಾನೂನು ಮತ್ತು ನಿಯಮ ಆಧಾರಿತ ಅಂತಾರಾಷ್ಟ್ರೀಯ ಆದೇಶವನ್ನು ಎತ್ತಿಹಿಡಿಯಲು ಅಂತರಾಷ್ಟ್ರೀಯ ಸಮುದಾಯವು ಕಾಯ್ದೆ 41 ಅಥವಾ 42 ನೇ ವಿಧಿಯ ಅಡಿಯಲ್ಲಿ ಕ್ರಮ ಜರುಗಿಸಬೇಕು” ಎಂದಿದ್ದಾರೆ.
For the third day in a row, #SanctionPakistan is a top trend on all social media platforms. Afghans are speaking loudly and clearly. Listen world, listen!
— Habib Khan (@HabibKhanT) August 11, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.