ನವದೆಹಲಿ: ದೇಶದಲ್ಲಿ ಕಳೆದ ಮೂರು ವರ್ಷಗಳಿಗೆ ಸಂಬಂಧಿಸಿದಂತೆ 5 ಲಕ್ಷ 17 ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ನೋಂದಣಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರೀಡ್ ವಾಹನಗಳ ಉತ್ತೇಜನಕ್ಕೆ ಪೂರಕವಾಗಿ 2015 ರಲ್ಲಿ ಕೇಂದ್ರ ಕೈಗಾರಿಕೆಗಳ ಸಚಿವಾಲಯವು ಫಾಸ್ಟರ್ ಎಡಾಪ್ಷನ್ ಮತ್ತು ಮ್ಯಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಗಳ ಉತ್ತೇಜನಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಂಡಿತ್ತು.
ಈ ಸಂಬಂಧ ಕೇಂದ್ರ ಸಚಿವ ಕೃಷ್ಣ ಪಾಲ್ ಗುರ್ಜಾರ್ ಅವರು ಮಾಹಿತಿ ನೀಡಿದ್ದು, ಫೇಮ್ ಇಂಡಿಯಾ ಯೋಜನೆಯ ಎರಡನೇ ಹಂತವು 2019 ರ.ಎಪ್ರಿಲ್ 1 ರಿಂದ ದೇಶದಲ್ಲಿ ಐದು ವರ್ಷಗಳ ಅವಧಿಗೆ ಅನುಷ್ಠಾನಗೊಂಡಿದೆ. ಈ ಯೋಜನೆ ಪಬ್ಲಿಕ್ ಮತ್ತು ಶೇರ್ಡ್ ಟ್ರಾನ್ಸ್ಪೋರ್ಟೇಷನ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಸಹಾಯಧನದ ಮೂಲಕ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.