ನವದೆಹಲಿ: ಜಪಾನ್ನ ಟೊಕಿಯೋದಲ್ಲಿ ನಡೆದ 2020 ರ ಒಲಿಂಪಿಕ್ಸ್ನಲ್ಲಿ ಆಗಸ್ಟ್ 7 ರಂದು ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಯೋಧ ನೀರಜ್ ಚೋಪ್ರಾ ಅವರು ಬಂಗಾರದ ಪದಕ ಪಡೆಯುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 7 ನ್ನು ಪ್ರತಿ ವರ್ಷವೂ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾವು ನ್ಯಾಷನಲ್ ಜಾವೆಲಿನ್ ಡೇ (ರಾಷ್ಟ್ರೀಯ ಜಾವೆಲಿನ್ ದಿನ) ವನ್ನಾಗಿ ಆಚರಣೆ ಮಾಡುವುದಾಗಿ ಘೋಷಿಸಿದೆ.
ಎಎಫ್ಐ ತನ್ನ ಎಲ್ಲಾ ರಾಜ್ಯ ಸದಸ್ಯರನ್ನು ಪ್ರತಿ ವರ್ಷ ಆಗಸ್ಟ್ ೭ ರಂದು ಜಾವೆಲಿನ್ ಸ್ಪರ್ಧೆಗಳನ್ನು ಆಯೋಜಿಸುವಂತೆ ಹೇಳಿದೆ ಎಂದು ಯೋಜನಾ ಸಮಿತಿ ಅಧ್ಯಕ್ಷರಾದ ಲಲಿತ್ ಭಾನೋಟ್ ಅವರು ಹೇಳಿದ್ದಾರೆ.
ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ದೇಶದ ಹಿರಿಮೆಯನ್ನು ಹೆಚ್ಚಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಎಎಫ್ಐ ಆಯೋಜನೆ ಮಾಡಿದ್ದ ಅಭಿನಂದನಾ ಸಮಾರಂಭದಲ್ಲಿ ಈ ಘೋಷಣೆ ಮಾಡಿದೆ. ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳನ್ನು ಎಎಫ್ಐ ವತಿಯಿಂದ ಸನ್ಮಾನಿಸಲಾಯಿತು.
ಜಾವೆಲಿನ್ ಥ್ರೋ ಆಟವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಗಸ್ಟ್ 7 ನ್ನು ರಾಷ್ಟ್ರೀಯ ಜಾವೆಲಿನ್ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹಾಗೆಯೇ ಮುಂದಿನ ವರ್ಷಗಳಿಂದ ನಮ್ಮ ಅಂಗಸಂಸ್ಥೆಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆ ನಡೆಸಲಿರುವುದಾಗಿಯೂ ಎಎಫ್ಐ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.